ಮಧುಗಿರಿ: ಶನಿವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ತಾಲ್ಲೂಕಿನ ದೊಡ್ಡೇರಿ ಹೋಬಳಿಯ
ಲಕ್ಷ್ಮಿಪುರ ಕೆರೆ ಕೋಡಿ ಹರಿದ ಪರಿಣಾಮ ಕೆರೆಯ ಹಿಂಬದಿಯಲ್ಲಿರುವ ದೊಡ್ಡೇರಿ ಗ್ರಾಮದ ದೊಡ್ಡ ತಿಮ್ಮಯ್ಯ ಮೂಡಲಗಿರಿಯಪ್ಪನವರ ಜಮೀನಿನ ಭೂಮಿಯಿಂದ ನೀರು ಉಕ್ಕಿ ಹರಿಯುತ್ತಿದೆ. ಇದನ್ನು ನೋಡಲು ತಂಡೋಪತಂಡವಾಗಿ ಸುತ್ತಮುತ್ತಲಿನ ಗ್ರಾಮಸ್ಥರು ಧಾವಿಸುತ್ತಿದ್ದಾರೆ.
ಈ ಸಂದರ್ಭ ವಕೀಲ ಶಿವಣ್ಣ ಮಾತನಾಡಿ, ಲಕ್ಷ್ಮಿಪುರದ ಕೆರೆ ತುಂಬಿ ಕೋಡಿ ಹರಿಯುತ್ತಿದೆ. ಕೆರೆಯ ಸುತ್ತಮುತ್ತಲಿನ ಹಳ್ಳಗಳು ತುಂಬಿ ಹರಿಯುತ್ತಿವೆ. ತಾಲ್ಲೂಕಿನಲ್ಲಿ ಹೆಚ್ಚಾಗಿ ಚೆಕ್ ಡ್ಯಾಂ ನಿರ್ಮಿಸಿರುವುದರಿಂದ ಅಂತರ್ಜಲ ಮಟ್ಟ ಹೆಚ್ಚಾಗಿದೆ.
ಕೆಲ ವರ್ಷಗಳ ಹಿಂದೆ ದೊಡ್ಡೇರಿ ಹೋಬಳಿ ಬರಗಾಲ ಪೀಡಿತವಾಗಿದ್ದು, ಈ ಬಾರಿ ಸುರಿದ ಮಳೆಯಿಂದಾಗಿ ಜಮೀನುಗಳಲ್ಲಿ ವ್ಯವಸಾಯಕ್ಕೆ ಯೋಗ್ಯವಾಗಿವೆ. ಇನ್ನು 2-3 ವರ್ಷ ವ್ಯವಸಾಯ ಮಾಡಿಕೊಳ್ಳಲು, ಜೀವನ ನಡೆಸಲು ಯಾವುದೇ ತೊಂದರೆ ಇಲ್ಲ. ರೈತರಿಗೆ ಇದೊಂದು ಶುಭ ಸುದ್ದಿ ಎಂದರು. ಡಿ.ಟಿ. ಚೇತನ್ , ಸತೀಶ್ ಡಿ.ಎಂ., ರಮೇಶ್ ಡಿ.ಎಸ್., ರಮೇಶ್ ರಾಮಣ್ಣ, ದೊಡ್ಡೇರಿ ಮಹಾಲಿಂಗಯ್ಯ ಮತ್ತಿತರರು ಇದ್ದರು.
PublicNext
31/07/2022 07:46 pm