ತುರುವೇಕೆರೆ: ಮನೆಯಲ್ಲಿ ಇದ್ದ ದೇವರ ಗುಡಿಯಲ್ಲಿ ನಾಗರಹಾವೊಂದು ಪ್ರತ್ಯಕ್ಷವಾಗಿ ಲಿಂಗದ ಸುತ್ತ ಹೆಡೆ ಬಿಚ್ಚಿ ನಿಂತಿರುವ ದೃಶ್ಯ ಗುರುವಾರ ತುರುವೇಕೆರೆ ತಾಲೂಕಿನ ಅಮ್ಮಸಂದ್ರ ಗ್ರಾಮದ ಬಳಿ ಇರುವ ಬೊಮ್ಮೇನಹಳ್ಳಿ ಯ ಜಯಣ್ಣ ಎಂಬುವರ ಮನೆಯಲ್ಲಿ ಈ ಘಟನೆ ನಡೆದಿದೆ.
ಮನೆಯ ದೇವರ ಗೂಡಿನಲ್ಲಿ ಕುಳಿತಿದ್ದ ನಾಗರಹಾವನ್ನು ಕಂಡು ಮನೆಯವರು ಹೌಹಾರಿದರು ಒಂದು ಗಂಟೆಗೂ ಹೆಚ್ಚು ಕಾಲ ನಾಗರಹಾವು ದೇವರ ಗೂಡಿನಲ್ಲಿ ಕುಳಿತು ಹೆಡೆಯೆತ್ತಿ ಅಚ್ಚರಿಯನ್ನು ಮೂಡಿಸಿದ್ದು,ಈ ಅಪರೂಪದ ದೃಶ್ಯವನ್ನು ಕಣ್ತುಂಬಿಕೊಳ್ಳಲು ತಾಲೂಕಿನಾದ್ಯಂತ ನೂರಾರು ಮಂದಿ ಮುಗಿಬಿದ್ದರು, ಈ ವಿಚಾರ ತಾಲೂಕಿನಾದ್ಯಂತ ಮಿಂಚಿನ ಸಂಚಲನವನ್ನು ಮೂಡಿಸಿದೆ.
ಇನ್ನು ಮನೆಯ ಮಾಲೀಕ ಜಯಣ್ಣ ತುರುವೇಕೆರೆಯ ಉರಗ ತಜ್ಞ ಬಾಣಸಂದ್ರ ರವೀಶ್ ಗೆ ಕರೆ ಮಾಡಿ ಹಾವನ್ನು ರಕ್ಷಣೆ ಮಾಡಲು ಕರೆ ಮಾಡಿದ ಹಿನ್ನೆಲೆಯಲ್ಲಿ ರವೀಶ್ ಸ್ಥಳಕ್ಕೆ ಭೇಟಿ ನೀಡಿ ಯಾವುದೇ ಮೂಢನಂಬಿಕೆಗೆ ಒಳಗಾಗಬೇಡಿ ಹಾವಿಗೆ ಯಾವುದೇ ತೊಂದರೆಯನ್ನು ನೀಡಬೇಡಿ ಪೂಜೆ-ಪುನಸ್ಕಾರಗಳು ಬೇಡ ಎಂದು ಮನವೊಲಿಸಿ ಹಾವನ್ನ ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.
ತುರುವೇಕೆರೆ ತಾಲೂಕಿನಾದ್ಯಂತ ಈ ವಿಚಾರ ವೈರಲ್ ಆಗಿದ್ದು ಈ ಶತಮಾನದಲ್ಲಿ ಜನರು ಇನ್ನೂ ಮೂಢನಂಬಿಕೆಯಲ್ಲಿ ಬದುಕುತ್ತಿದ್ದಾರೆ ಎಂದು ಪ್ರಜ್ಞಾವಂತರು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯನ್ನು ಆರಂಭಿಸಿದ್ದಾರೆ.
-ರಾಘವೇಂದ್ರ ದಾಸರಹಳ್ಳಿ, ಪಬ್ಲಿಕ್ ನೆಕ್ಸ್ಟ್
PublicNext
29/07/2022 05:51 pm