ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಅಥಣಿಯಲ್ಲಿ ಸಿಕ್ಕ ಪುನುಗು ಬೆಕ್ಕು

ವರದಿ: ಸಂತೋಷ ಬಡಕಂಬಿ

ಅಥಣಿ: ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಹೊರವಲಯದಲ್ಲಿನ ಕೃಷ್ಣಾ ಬಡಾವಣೆಯಲ್ಲಿ ನಿನ್ನೆ (ಭಾನುವಾರ) ರಾತ್ರಿ ಚಿರತೆಯ ಮರಿಯನ್ನು ಹೋಲುವಂತ ಪ್ರಾಣಿಯೊಂದು ಸೆರೆ ಸಿಕ್ಕು ರೈತರಿಗೆ ನೆಮ್ಮದಿ ಸಿಕ್ಕಂತಾಗಿತ್ತು. ಬೆಳಿಗ್ಗೆ ಅರಣ್ಯಾಧಿಕಾರಿಗಳು ಬಂದು ಪರಿಶೀಲಿಸಿ ಇದೊಂದು ಪುನುಗು ಬೆಕ್ಕು (ಸಿವೆಟ್ ಕ್ಯಾಟ್) ಎಂದಾಗ ಸುತ್ತಮುತ್ತಲಿನ ಜನ ನಿಟ್ಟುಸಿರು ಬಿಟ್ಟರು.

ನಮ್ಮ ದೇಶದಲ್ಲಿ ಬಹಳ ವಿರಳವಾಗಿರುವ ಈ ಪುನುಗು ಬೆಕ್ಕು ಬಲು ಅಪರೂಪ. ನಿನ್ನೆ ರಾತ್ರಿ ಮಹಾದೇವ ಹೊನ್ನೊಳ್ಳಿ ಎಂಬುವ ರೈತರ ಹೊಲದಲ್ಲಿ ಹಿಡಿದು ಕೋಳಿಯ ಬೋನಿನಲ್ಲಿ ಇರಿಸಲಾಗಿತ್ತು. ಇವತ್ತು ಬೆಳಿಗ್ಗೆ ವಲಯ ಅರಣ್ಯ ಅಧಿಕಾರಿಗೆ ಮಾಹಿತಿ ತಿಳಿಸಿದಾಗ ಅವರು ಸ್ಥಳಕ್ಕೆ ಬಂದು ಈ ಪ್ರಾಣಿಯನ್ನು ವಶಪಡಿಸಿಕೊಂಡರು.

ಈ ಕುರಿತು ಮಾತನಾಡಿದ ಅರಣ್ಯಾಧಿಕಾರಿ ಪ್ರಶಾಂತ ಗಾಣಿಗೇರ ಅವರು ಈ ಬೆಕ್ಕನ್ನು‌ ನಾವು ಅಥಣಿ ಅರಣ್ಯ ಪ್ರದೇಶದೊಳಗೆ ಬಿಡುತ್ತೇವೆ ಎಂದು ತಿಳಿಸಿದರು. ಒಟ್ಟಿನಲ್ಲಿ ಅಪರೂಪವಾಗಿರುವ ಈ ಬೆಕ್ಕನ್ನು ನೋಡಲು ಅಪಾರ ಜನ‌ಸೇರಿದಂತೂ ಸುಳ್ಳಲ್ಲ.

Edited By : Shivu K
PublicNext

PublicNext

18/07/2022 11:26 am

Cinque Terre

64.74 K

Cinque Terre

2

ಸಂಬಂಧಿತ ಸುದ್ದಿ