ಬೆಂಗಳೂರು: ಸಿಲಿಕಾನ ಸಿಟಿಯಲ್ಲಿ ನಿನ್ನ ರಾತ್ರೆ ಭಾರೀ ಮಳೆ ಆಗಿದೆ. ಇದರ ಪರಿಣಾಮ ರಾಜಕಾಲುವೆಯಲ್ಲಿ ವ್ಯಕ್ತಿಯೊಬ್ಬ ಕೊಚ್ಚಿ ಹೋಗಿದ್ದಾನೆ. ಕೆ.ಆರ್.ಪುರಂದ ಗಾಯಿತ್ರಿ ಬಡಾವಣೆಯಲ್ಲಿ ಈ ಒಂದು ಘಟನೆ ನಡೆದಿದೆ.
ರಾಜಕಾಲುವೆಯಲ್ಲಿ ಕೊಚ್ಚ ಹೋದ ಯುವಕನನ್ನ ಶಿವಮೊಗ್ಗ ಮೂಲದ ಮಿಥುನ್ ಸಾಗರ್ (24) ಎಂದು ಗುರುತಿಸಲಾಗಿದೆ.
ಬೆಂಗಳೂರಿನಲ್ಲಿ ರಾತ್ರಿ 7 ಗಂಟೆ ಹೊತ್ತಿಗೆ ಭಾರಿ ಮಳೆ ಸುರಿದಿದೆ. ಇದರಿಂದ ರಾಜಕಾಲುವೆ ತುಂಬಿ ಹರಿದಿದೆ. ರಾತ್ರಿ 12 ಗಂಟೆ ಆಗೋ ಹೊತ್ತಿಗೆ ಮಿಥುನ್ ಇದ್ದ ಮನೆ ಜಲಾವೃತಗೊಂಡಿದೆ.
ಕಟ್ಟದ ಬಳಿ ಇದ್ದ ಕಾಂಪೌಂಡ್ ಕೂಡ ಬಿದ್ದು ಬಿಟ್ಟಿದೆ. ಆಗ ನೀರು ಇನ್ನೂ ಹೆಚ್ಚು ನುಗ್ಗಿ ಬಂದಿದೆ. ಮಿಥುನ್ ಬೈಕ್ ಇದರಲ್ಲಿ ಕೊಚ್ಚು ಹೋಗಲಾರಂಭಿಸಿದೆ. ಅದನ್ನ ತಡೆಯಲು ಹೋಗಿ ಮಿಥುನ್ ಕೊಚ್ಚಿ ಹೋಗಿದ್ದಾನೆ.
PublicNext
18/06/2022 07:55 am