ಬೆಂಗಳೂರು: ಸಾಮಾನ್ಯವಾಗಿ ಹಾವುಗಳು ಕಪ್ಪೆ, ಸಣ್ಣ ಪ್ರಾಣಿಗಳು, ಮೊಟ್ಟೆ ತಿನ್ನುವುದನ್ನು ನೋಡಿದ್ದೇವೆ. ಆದರೆ ಕಾಳಿಂಗ ಸರ್ಪವೊಂದು ನಾಗರ ಹಾವನ್ನೇ ನುಂಗಿದ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹೌದು. ಆಹಾರಕ್ಕಾಗಿ ಅತ್ತಿಂದಿತ್ತ ತಿರುಗಾಡುತ್ತಿದ್ದ ದೈತ್ಯಾಕಾರದ ಕಾಳಿಂಗಸರ್ಪ ಬಿಲದತ್ತ ಬಂದಿತ್ತು. ಈ ವೇಳೆ ಬಿಲದಲ್ಲಿ ನಾಗರ ಹಾವು ಅವಿತಿರುವುದು ಗಮನಿಸಿ ಭರ್ಜರಿ ಬೇಟೆ ನಡೆಸಿದೆ. ಬಿಲಕ್ಕೆ ಹೊಕ್ಕ ಕಾಳಿಂಗ ಸರ್ಪವು ಹಾವನ್ನು ಹೊರಗೆಳೆದು ನುಂಗಿದೆ. ಈ ವಿಡಿಯೋಗೆ ನೆಟ್ಟಿಗರು ತಮ್ಮದೆ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ.
PublicNext
19/05/2022 10:34 pm