ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೂ ನಗೆ ಬೀರಿದ ಕಾಫಿ ತೋಟ

ಚಿಕ್ಕಮಗಳೂರು : ಇದು ಚಿಕ್ಕಮಗಳೂರಿನ ಚಿಕ್ಕ ಮಲ್ಲಿಗೆಯಲ್ಲ ಚಿಕ್ಕ ಮಗಳೂರ ದೊಡ್ಡ ಮಲ್ಲಿಗೆ. ಹೌದು ಈಗಾ ಚಿಕ್ಕಮಗಳೂರಿನಲ್ಲಿ ಕಾಫಿಯ ಹೂ ನಗೆ ನೋಡುಗರ ಮನಗೆದ್ದಿದೆ. ಮದುವಣಗಿತ್ತಿಯಂತೆ ಸಿಂಗಾರಗೊಂಡ ಕಾಫಿ ತೋಟದಲ್ಲಿ ಹಸಿರಿನ ಮಧ್ಯೆ ಬಿಳಿ ಮುತ್ತು ಪೋಣಿಸಿದಂತಿರುವ ಹೂವಿನ ಸೊಗಸನ್ನು ಕಣ್ತುಂಬಿಕೊಳ್ಳುವುದೇ ಮನಸ್ಸಿಗೆ ಆನಂದ.

ಸಾಮಾನ್ಯವಾಗಿ ಡಿಸೆಂಬರ್ ಮತ್ತು ಜನವರಿ ತಿಂಗಳಲ್ಲಿ ಕಾಫಿ ಹಣ್ಣು ಕೊಯ್ದ ನಂತರ ತೋಟಕ್ಕೆ ನೀರುಣಿಸುತ್ತಿದ್ದಂತೆ

ಮಲೆನಾಡಿನಲ್ಲಿ ಕಾಫಿ ಹೂವಿನ ಸೊಗಸು ಶುರುವಾಗುತ್ತದೆ. ಸದ್ಯ ಕಾಫಿಗಿಡಗಳು ಹೂ ಬಿಟ್ಟು ಘಮ ಘಮ ಸುವಾಸನೆಯೊಂದಿಗೆ ಜನರನ್ನು ಆಕರ್ಷಿಸುತ್ತಿದೆ.

Edited By : Nirmala Aralikatti
PublicNext

PublicNext

18/03/2022 11:23 am

Cinque Terre

44.86 K

Cinque Terre

0