ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾನಗಲ್ ಹೊರವಲಯದಲ್ಲಿ ಕಾಡಾನೆ ಪ್ರತ್ಯಕ್ಷ; ಆತಂಕದಲ್ಲಿ ಜನರು

ಹಾನಗಲ್: ಹಾವೇರಿ ಜಿಲ್ಲೆಯ ಹಾನಗಲ್ ಹೊರವಲಯದಲ್ಲಿರೋ ಕಂಬಳಗೇರಿ ಕೆರೆಯಲ್ಲಿ ಇಂದು ಕಾಡಾನೆ ಪ್ರತ್ಯಕ್ಷವಾಗಿದೆ.

ಏಕಾಏಕಿ ಕಾಡಾನೆ ಪ್ರತ್ಯಕ್ಷವಾಗಿದ್ದಕ್ಕೆ ಕೆರೆಯ ಸುತ್ತಮುತ್ತಲಿನ ಜನರು ಹಾಗೂ ಮೀನುಗಾರರಿಗೆ ಆತಂಕ ಶುರುವಾಗಿದೆ. ಈ ಕುರಿತು ಈಗಾಗಲೇ ತಾಲ್ಲೂಕಿನ ವ್ಯಾಪ್ತಿಯ ಅರಣ್ಯ ಇಲಾಖೆಗೆ ದೂರು ಸಲ್ಲಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಕಾಡಾನೆ ಓಡಿಸಲು ಹರಸಾಹಸವೇ ನಡೆಸಬೇಕಾಯಿತು.

ಎಷ್ಟೇ ಹೊರ ಓಡಿಸಿದರೂ ಮತ್ತೆ ಮತ್ತೆ ಕೆರೆ ಅಂಗಳದತ್ತಲೆ ಆನೆ ಬರುತ್ತಿದೆ. ಕಾರವಾರ ಜಿಲ್ಲೆಯ ಮುಂಡಗೋಡ ಅರಣ್ಯ ಪ್ರದೇಶದಿಂದ ಕಾಡಾನೆ ಬಂದಿರೋ ಸಾಧ್ಯತೆ. ಮದ್ದು ಗುಂಡು ಹಾರಿಸಿ ಕಾಡಾನೆ ಓಡಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಹರಸಾಹಸ ಮಾಡಿದ್ದಾರೆ.

Edited By : Shivu K
PublicNext

PublicNext

09/02/2022 06:32 pm

Cinque Terre

62.75 K

Cinque Terre

0