ಚಿಕ್ಕಮಗಳೂರು: ನೀನೆ ನನ್ನ ಆಹಾರವೆಂದು ಹರಸಾಹಸಪಟ್ಟು ಕಪ್ಪೆಯನ್ನು ಮರದ ಬಳ್ಳಿಯ ನಡುವೆ ಸುತ್ತಿಕೊಂಡು ಹಾವೊಂದು ತಿಂದು ಹಾಕಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಮೆಣಸೆ ಸಮೀಪದ ಕೆರೆಮನೆಯಲ್ಲಿ ನಡೆದಿದೆ.
ಬಿಲ್ ಮುರಿ ಎಂಬ ಅಪರೂಪದ ಹಾವೊಂದು ಕಪ್ಪೆ ಬೇಟೆಯಾಡಿದೆ. ಮರದಲ್ಲಿ ಬಳ್ಳಿಯಂತೆ ನೇತಾಡಿಕೊಂಡಿರುವ ವಿಷಕಾರಿಯಲ್ಲದ ತುಂಬಾ ಅಪರೂಪದ ಹಾವು ಇದು. ಬಿಲ್ ಮುರಿ ಹಾವು ಸಣ್ಣಪಕ್ಷಿಗಳು, ಕಪ್ಪೆಗಳನ್ನ ತಿಂದು ಬದುಕುತ್ತದೆ.
ಕಪ್ಪೆಯನ್ನು ಬಿಲ್ ಮುರಿ ಹಾವು ಬೇಟೆಯಾಡುವ ದೃಶ್ಯವನ್ನು ಪ್ರಗತಿಪರ ರೈತ ಭರತ್ ರಾಜ್ ಸೆರೆ ಹಿಡಿದಿದ್ದಾರೆ. ಈ ಕುರಿತಾದ ವಿಡಿಯೋ ಇಲ್ಲಿದೆ ನೋಡಿ.
PublicNext
07/02/2022 08:52 am