ಚಾಮರಾಜನಗರ : ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟದ ಕೆ.ಗುಡಿಯಲ್ಲಿ ಗಜ ಪರಿವಾರದ ದರ್ಶನ ಕಂಡ ಪ್ರವಾಸಿಗರು ಫುಲ್ ಖುಷಿಯಾಗಿದ್ದಾರೆ.
ಏಕಾಏಕಿ ಕಾಡುಹಾದಿಯಲ್ಲಿ ಮರಿಗಳೊಟ್ಟಿಗೆ ಪ್ರವಾಸಿಗರನ್ನು ಅಡ್ಡಹಾಕಿದ ಆನೆಗಳು ಬರೋಬ್ಬರಿ ಒಂದು ಗಂಟೆ ಸಫಾರಿ ಜೀಪನ್ನು ನಿಲ್ಲಿಸಿವೆ. ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಫಾರಿಯಲ್ಲಿದ್ದ ಪ್ರವಾಸಿಗರಿಗೆ ಗಜಪಡೆಯ ದರ್ಶನ ಸಿಕ್ಕಾಪಟ್ಟೆ ಖುಷಿ ಕೊಟ್ಟಿದೆ.
ಬೆಳಗ್ಗಿನ ಜಂಗಲ್ ಲಾಡ್ಜ್ ಸಫಾರಿಯಲ್ಲಿ "ಸುತ್ತುರೋಡ್" ಎಂಬ ಸಫಾರಿ ಜೋನಿನ ಸ್ಥಳದಲ್ಲಿ ಎರಡು ಮರಿಗಳೊಟ್ಟಿಗೆ ಅಡ್ಡಹಾಕಿದ ಮೂರು ಆನೆಗಳು ಪ್ರವಾಸಿಗರಿಗೆ ದಾರಿ ಕೊಡದೇ ತಾವು ಮುಂದೆ ಹೋಗದೇ ರಸ್ತೆ ಮಧ್ಯದಲ್ಲೇ ನಿಂತು ಪ್ರವಾಸಿಗರಿಗೆ ಅದ್ಭುತ ಪೋಸು ಕೊಟ್ಟವೆ.
ಸಾಮಾನ್ಯವಾಗಿ ಜನರನ್ನು ಕಂಡರೇ ಆನೆ ದಾಳಿ ಮಾಡಲು ಮಂದಾಗುವುದು, ಜೀಪನ್ನು ಅಟ್ಟಾಡಿಸುವುದನ್ನು ಕಂಡಿದ್ದೇವೆ ಆದ್ರೆ ಈ ಆನೆ ಹಿಂಡು ಮಾತ್ರ ಪರಿವಾರದ ಸಮೇತ ಸೌಮ್ಯ ವರ್ತನೆ ತೋರಿರುವುದು ಅಚ್ಚರಿಯೊಂದಿಗೆ ಮುದಕೊಟ್ಟಿವೆ.
ಇನ್ನು ಪ್ರವಾಸಿಗರು ಆನೆ ಹಿಂಡಿನೊಡನೆ ಫೋಟೋ ಕ್ಲಿಕ್ಕಿಸಿಕೊಂಡು, ವಿಡಿಯೋ ಮಾಡಿಕೊಂಡು ಸಂಭ್ರಮಿಸಿದ್ದಾರೆ.
PublicNext
29/01/2022 03:32 pm