ಹಾಸನ: ಹಾವಿಗೆ ಮುಂಗುಸಿ ಕಂಡರೆ ಆಗುವುದಿಲ್ಲ ಇವೆರಡು ಆಜನ್ಮ ವೈರಿಗಳು. ಇವುಗಳ ಕಾದಾಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಾಣಸಿಗುತ್ತದೆ. ಆದರೆ ನಾಯಿ- ನಾಗರ ಹಾವು ಸುಮಾರು 25 ನಿಮಿಷಕ್ಕೂ ಹೆಚ್ಚು ಕಾಲ ಸೆಣಸಾಟ ನಡೆಸಿ ಪ್ರಾಣಬಿಟ್ಟಿವೆ.
ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಶುಕ್ರವಾರಸಂತೆ ಬಳಿ ಘಟನೆ ನಡೆದಿದ್ದು, ನಾಯಿ- ನಾಗರ ಹಾವು ಸೆಣಸಾಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಂಜುನಾಥ್ ತಮ್ಮ ನಾಯಿಯ ಜೊತೆಗೆ ಜಮೀನಿಗೆ ತೆರಳುತ್ತಿದ್ದರು. ಈ ವೇಳೆ ದಾರಿಯಲ್ಲಿ ಅಡ್ಡ ಸಿಕ್ಕ ನಾಗರ ಹಾವನ್ನು ಕಂಡ ನಾಯಿ ದಾಳಿ ನಡೆಸಿದೆ. 25 ನಿಮಿಷಕ್ಕೂ ಹೆಚ್ಚು ಕಾಲ ಹೋರಾಟ ನಡೆಸಿದ ನಾಯಿ ಹಾವನ್ನು ಸಾಯಿಸಿ ತಾನೂ ಪ್ರಾಣಬಿಟ್ಟಿದೆ.
PublicNext
28/01/2022 04:14 pm