ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿರಸಿ: ಪ್ರಶಾಂತನ ಶಾಂತತೆಗೆ ಶರಣಾದ 'ಕಾಳಿಂಗ'!; ನಾಡಿನಿಂದ ಅರಣ್ಯ ಯಾನ

ಉತ್ತರ ಕನ್ನಡ: ಶಿರಸಿ ತಾಲೂಕಿನಿಂದ 35 ಕಿಲೋ ಮೀಟರ್‌ನಷ್ಟು ದೂರದಲ್ಲಿರುವ 'ಮತ್ತಿಘಟ್ಟ' ದಟ್ಟಾರಣ್ಯದಿಂದ ಕೂಡಿರುವ ಪ್ರದೇಶ. ಇಲ್ಲಿನ ಮನೆಯೊಂದರಿಂದ ಶಿರಸಿಯ ಉರಗ ಪ್ರೇಮಿ ಪ್ರಶಾಂತ್ ಹುಲೇಕಲ್ ಅವರಿಗೆ ಕರೆ ಬಂದಿತ್ತು. ಅದರಂತೆ ಸ್ಥಳಕ್ಕೆ ತೆರಳಿದ ಪ್ರಶಾಂತ್ ಗೆ ಅಚ್ಚರಿ ಕಾದಿತ್ತು. ಬರೋಬ್ಬರಿ 14 ಅಡಿ ಉದ್ದದ ಕಾಳಿಂಗ ಸರ್ಪ ಮತ್ತಿಘಟ್ಟದ ಮನೆಯ ಗೋಡೆ ನಡುವೆ ಅವಿತು ಕೂತಿತ್ತು!

ಸಾಕಷ್ಟು ಹಾವುಗಳನ್ನು ಹಿಡಿದಿರುವ ಪ್ರಶಾಂತ್, ಕಾಳಿಂಗ ಸರ್ಪವನ್ನು ನೋಡಿ ಹೆದರದೆ ಅದನ್ನು ಹಿಡಿಯುವ ಕಾರ್ಯಾಚರಣೆ ನಡೆಸಿದ್ದಾರೆ. ಈ ಕಾರ್ಯಾಚರಣೆ ಎಂಥವರಿಗೂ ಮೈ ಜುಮ್ ಎನಿಸುವಂತಿದೆ. ಸ್ನೇಕ್ ಕ್ಯಾಚರ್ ಸ್ಟಿಕ್‌ನ ಸಹಾಯದಿಂದ ಕಾಳಿಂಗನನ್ನು ಹಿಡಿಯಲು ಮುಂದಾದ ಪ್ರಶಾಂತ್ ಅವರ ಮೇಲೆ ಕಾಳಿಂಗ ಹೆಡೆಯೆತ್ತಿ ಎರಗಲು ಮುಂದಾಗಿರುವ ರೋಮಾಂಚಕ ದೃಶ್ಯವನ್ನ ಪ್ರಶಾಂತ್ ಅವರೊಂದಿಗಿದ್ದ ಯುವಕ ಸೆರೆ ಹಿಡಿದಿದ್ದಾರೆ.

ಅರ್ಧ ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿದ ಪ್ರಶಾಂತ್, ಕಾಳಿಂಗನನ್ನು ಸುರಕ್ಷಿತವಾಗಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾದರು. ಕೊನೆಗೆ ಕಾಳಿಂಗನನ್ನು ಮರಳಿ ಕಾಡಿಗೆ ಬಿಟ್ಟು ಬಂದಿದ್ದಾರೆ.

Edited By : Nagesh Gaonkar
PublicNext

PublicNext

20/01/2022 08:08 pm

Cinque Terre

105.42 K

Cinque Terre

5