ಚಿಕ್ಕಮಗಳೂರ:ಸಂಕ್ರಾಂತಿ ಹಬ್ಬದ ದಿನವೇ ಕಬ್ಬಿನಗದ್ದೆಯಲ್ಲಿ ಗಜಪಡೆ ಮಸ್ತಿ ಮಾಡುತ್ತಿವೆ. ಎರೇಹಳ್ಳಿಯಲ್ಲಿ ಬೀಡು ಬಿಟ್ಟಿರುವ ಮೂರು ಒಂಟಿ ಸಲಗಗಳ ಆರ್ಭಟಕ್ಕೆ ಕಬ್ಬು ಬೆಳೆದ ರೈತರು ಕಂಗಾಲಾಗಿದ್ದಾರೆ.
ಹೇಗಿದೆ ಗೊತ್ತಾ ಕಾಡಾನೆಗಳ ದಾಂಧಲೆ ದೃಶ್ಯ, ಈ ದೃಶ್ಯವನ್ನು ನೋಡಿದ್ರೆ ನೀವು ಬೆರಗಾಗೋದು ಗ್ಯಾರಂಟಿ. ಗಜಪಡೆಯನ್ನ ಕಾಡಿಗಟ್ಟಲು ಅರಣ್ಯ ಇಲಾಖೆ ಸಿಬ್ಬಂದಿಗಳು, ಸ್ಥಳೀಯರು ಎಷ್ಟೇ ಪ್ರಯತ್ನಿಸಿದರೂ ಯಾರೇ ಕೂಗಾಡಲಿ, ಊರೇ ಹೋರಾಡಲಿ ನಾವ್ ಹೋಗಲ್ಲವೆಂದು ಪಟ್ಟುಹಿಡಿದ ಗಜಪಡೆಯನ್ನು ಓಡಿಸಲು ಜನರು ಹೈರಾಣಾಗಿದ್ದಾರೆ. ಆನೆ ನಡೆದಿದ್ದೇ ದಾರಿ ಅನ್ನೋದನ್ನ ಸಾಬೀತು ಮಾಡಿದಂತಿದೆ ಈ ಗಜಪಡೆಯ ಸೆರೆಹಿಡಿದ ದೃಶ್ಯಗಳು.
PublicNext
15/01/2022 07:05 pm