ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

25 ಜನ ಪ್ರಯಾಣಿಕರಿದ್ದ ಬಸ್ಸನ್ನೇ ತಳ್ಳಿಕೊಂಡು ಹೋದ ಆನೆ

ಭುವನೇಶ್ವರ್: ಆನೆಯೊಂದು ಪ್ರಯಾಣಿಕರ ಬಸ್ಸನ್ನು ತಳ್ಳಿಕೊಂಡು ಹೋದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಒಡಿಶಾದ ಮಯೂರ್‌ಭಂಜ್ ಜಿಲ್ಲೆಯ ರಸ್ಗೋಬಿಂದ್‌ಪುರ ವ್ಯಾಪ್ತಿಯಲ್ಲಿ ಆನೆಗಳ ಹಾವಳಿ ಹೆಚ್ಚಾಗಿದೆ. ಇದಕ್ಕೆ ಮತ್ತೊಂದು ಸಾಕ್ಷಿ ಎಂಬಂತಹ ವಿಡಿಯೋ ವೈರಲ್ ಆಗಿದೆ.

ತಾರಿಣಿ ಎಂಬ ಬಸ್ಸಿನಲ್ಲಿ ಸುಮಾರು 20ರಿಂದ 25 ಪ್ರಯಾಣಿಕರಿದ್ದರು. ಈ ವೇಳೆ ಏಕಾಏಕಿ ಬಂದ ಆನೆಯೊಂದು ಬಸ್ ತಳ್ಳಿದ್ದರಿಂದ ಪ್ರಯಾಣಿಕರು ಆತಂಕಕ್ಕೆ ಒಳಗಾದರು. ಇದನ್ನು ಕಂಡ ಸ್ಥಳೀಯರು ಕಿರುಚಾಡಿ ಆನೆಯನ್ನು ಹೆದರಿಸಲು ಪ್ರಯತ್ನಿಸಿದ ದೃಶ್ಯವನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಅದೃಷ್ಟವಶಾತ್ ಆನೆ ದಾಳಿಯಿಂದ ಬಸ್​ನಲ್ಲಿದ್ದವರಿಗೆ ಯಾವುದೇ ರೀತಿ ಪ್ರಾಣಾಪಾಯ ಆಗಿಲ್ಲ. ಆದರೆ ಬಸ್‌ನ ಕೆಲವು ಕಿಟಕಿಯ ಗಾಜುಗಳು ಒಡೆದಿವೆ.

Edited By : Shivu K
PublicNext

PublicNext

10/01/2022 09:25 am

Cinque Terre

59.63 K

Cinque Terre

2