ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಸವರ್ಷಕ್ಕೆ ನಂದಿಗಿರಿಧಾಮ ಬಂದ್, ಪ್ರವಾಸಿಗರಿಗಿಲ್ಲ ಪ್ರವೇಶ

ಚಿಕ್ಕಬಳ್ಳಾಪುರ : ತಾಲ್ಲೂಕಿನ ವಿಶ್ವವಿಖ್ಯಾತ ನಂದಿಗಿರಿಧಾಮದ ಕಡೆ ಹಜ್ಜೆ ಹಾಕುವ ಮುನ್ನ ಪ್ರವಾಸಿಗರು ಈ ಸುದ್ದಿ ನೋಡಲೇಬೇಕು ಯಾಕಂದ್ರೆ ಈ ವರ್ಷ ಹೊಸವರ್ಷದ ಸಂಭ್ರಮಕ್ಕೆ ನಂದಿಗಿರಿಗೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸಲಾಗಿದೆ. ಎರಡು ದಿನಗಳ ಕಾಲ ಪ್ರವೇಶ ನಿಷೇಧಿಸಿ ಜಿಲ್ಲಾಧಿಕಾರಿ ಆರ್.ಲತಾ ಆದೇಶ ಹೊರಡಿಸಿದ್ದಾರೆ.

ಪರಿಸರ ಸಂರಕ್ಷಣೆ‌ ಹಾಗೂ ಕೋವಿಡ್ ನಿಯಂತ್ರಣ ದೃಷ್ಟಿಯಿಂದ ನಂದಿಗಿರಿಗೆ 2021ರ ಡಿಸೆಂಬರ್ 30ರ ಸಂಜೆ 6 ರಿಂದ 2022 ರ ಜನವರಿ 2 ರ ಮುಂಜಾನೆ 6 ಗಂಟೆಯವರೆಗೆ ನಿಷೇಧ ಹೇರಲಾಗಿದೆ.

Edited By : Nagesh Gaonkar
PublicNext

PublicNext

27/12/2021 07:47 pm

Cinque Terre

101.87 K

Cinque Terre

0