ಮೈಸೂರು: ಕಾಫಿ ತೋಟದ ತಂತಿ ಬೇಲಿಗೆ ಸಿಲುಕಿದ್ದ ಕರಡಿಯನ್ನು ರಕ್ಷಣೆ ಮಾಡಿದ್ದ ಅರಣ್ಯ ಸಿಬ್ಬಂದಿ ವಾಪಸ್ ಕಾಡಿಗೆ ಬಿಟ್ಟಿದ್ದಾರೆ. ಬೋನು ತೆರೆದಾಗ ಚಂಗನೇ ಜಿಗಿದ ಕರಡಿ ಕ್ಯಾಮರಾ ಕಡೆ ಒಂದು ಲುಕ್ ಕೊಟ್ಟು ಖುಷಿಯಿಂದ ಕಾಡಿನತ್ತ ಓಡಿದೆ.
ಕಳೆದ ಗುರುವಾರ ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಕಾನೂರು ಗ್ರಾಮದ ಕಾಫಿ ತೋಟದ ತಂತಿ ಬೇಲಿಗೆ ಸಿಲುಕಿದ ಕರಡಿ ಸುಮಾರು ಹೊತ್ತು ನರಳಾಡಿತ್ತು. ಇದನ್ನು ಗಮನಿಸಿದ ಸ್ಥಳೀಯರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಧಾವಿಸಿದ ಅರಣ್ಯ ಸಿಬ್ಬಂದಿ ಕರಡಿಯನ್ನು ರಕ್ಷಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಸದ್ಯ ಕರಡಿ ಚೇತರಿಸಿಕೊಂಡು ಆರೋಗ್ಯವಾಗಿದೆ. ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದ ಹಿನ್ನಲೆ ಕರಡಿಗೆ ಚಿಪ್ ಅಳವಡಿಸಿ ನಾಗರಹೊಳೆ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ.
PublicNext
25/12/2021 01:34 pm