ಹಾಸನ : 3 ಚಿಕ್ಕ ಮರಿಗಳು ಸೇರಿದಂತೆ ಒಂದೇ ಗುಂಪಿನಲ್ಲಿರುವ 24 ಕಾಡಾನೆಗಳು ಮತ್ತೆ ತೋಟದಿಂದ ಭತ್ತದ ಗದ್ದೆಗಳಿದು ಕಾಫಿ ಬೆಳೆ, ಭತ್ತ ಸೇರಿದಂತೆ ಇತರೆ ಬೆಳೆ ಹಾನಿ ಮಾಡಿ ಪುಂಡಾಟ ಮೆರೆಯುತ್ತಿವೆ.
24 ಕಾಡಾನೆಗಳಿರುವ ಹಿಂಡನ್ನು ಕಂಡ ಜನ ಗಜಗಳ ಗುಂಪನ್ನು ಮೊಬೈಲ್ ನಲ್ಲಿ ಚಿತ್ರಿಕರಿಸಿದ್ದಾರೆ. ಸಕಲೇಶಪುರ ತಾಲ್ಲೂಕಿನ ಕುಂಬಾರಗಟ್ಟೆಯ ಗದ್ದೆ ಬಯಲಿನಲ್ಲಿ ಕಾಣಿಸಿಕೊಂಡಿದ್ದ ಕಾಡಾನೆಗಳ ಹಿಂಡಿನ ಉಪಟಳದಿಂದ ಬೆಳೆ ಕಳೆದುಕೊಂಡು ರೈತರು ಕಂಗಾಲಾಗಿದ್ದಾರೆ.
ಇನ್ನು ತನ್ನನ್ನು ಹಿಂಬಾಲಿಸಿದ ಶ್ವಾನಗಳನ್ನ ಒಂಟಿ ಸಲಗ ಅಟ್ಟಾಡಿಸಿಕೊಂಡು ಹೋಗಿದೆ. ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಹೊಸಗದ್ದೆ ಗ್ರಾಮಕ್ಕೆ ಇಂದು ಬೆಳ್ಳಂಬೆಳಿಗ್ಗೆ ಎಂಟ್ರಿ ಕೊಟ್ಟ ಗಜ ಗ್ರಾಮದೊಳಗೆ ಸಂಚರಿಸಿ ಹೊರ ಹೋಗುವಾಗ ಹಿಂಬಾಲಿಸಿದ ನಾಯಿಗಳ ಮೈ ಚಳಿ ಬಿಡಿಸಿದೆ.
ಸದ್ಯ ಕಾಡಾನೆಗಳ ಜೊತೆಗೆ ಜೀವ ಕೈಲಿ ಹಿಡಿದು ಬದುಕುತ್ತಿರೋ ಮಲೆನಾಡಭಾಗದ ಜನ ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರಕ್ಕಾಗಿ ಆಗ್ರಹಿಸಿದ್ದಾರೆ. ಅರಣ್ಯ ಮಂತ್ರಿಗಳೇ, ಮುಖ್ಯ ಮಂತ್ರಿಗಳೇ ನೋಡಿ ನಮ್ಮ ಪರಿಸ್ಥಿತಿ ಕಾಡಾನೆಯಿಂದ ನಮ್ಮ ಬದುಕು ಹಾಳಾಗಿದೆ. ಹೀಗಾದ್ರೆ ಹೇಗೆ ಎಂದು ರೈತನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳೆಯನ್ನು ಆನೆ ತಿಂದ್ರೆ ನಾವು ಆನೆ ಲದ್ದಿ ತಿಂದು ಬದುಕೋದಾ ಹೇಳಿ ಸ್ವಾಮಿ ಎಂದು ಬೆಳೆ ಕಳೆದುಕೊಂಡ ರೈತ ಕಣ್ಣೀರು ಹಾಕಿದ್ದಾರೆ.
PublicNext
27/11/2021 11:44 am