ಅಮರಾವತಿ/ಕಡಪ(ಆಂಧ್ರ ಪ್ರದೇಶ): ಬಿಟ್ಟೂ ಬಿಡದೇ ಸುರಿಯುತ್ತಿರುವ ಮಳೆ ಪರಿಣಾಮ ಆಂಧ್ರದಲ್ಲಿ ದಿಢೀರ್ ಪ್ರವಾಹ ಆವರಿಸಿದೆ. ಪರಿಣಾಮ ಸುಮಾರು 30ಕ್ಕೂ ಹೆಚ್ಚು ಜನ ನಾಪತ್ತೆಯಾಗಿದ್ದಾರೆ. ಕಡಪ ನಗರ ಹಾಗೂ ಜಿಲ್ಲೆಯ ಹಲವೆಡೆ ಸೃಷ್ಟಿಯಾದ ಪ್ರವಾಹ ತನ್ನ ರೌದ್ರಾವತಾರ ತೋರಿಸಿದೆ.
ಚೆಯ್ಯೂರು ನದಿ ಉಕ್ಕಿ ಹರಿದ ಪರಿಣಾಮ ಸುತ್ತಲಿನ ಗ್ರಾಮಗಳು ಜಲಾವೃತವಾಗಿವೆ. ಇನ್ನು ತಿರುಪತಿ ತಿರುಮಲ ವೆಂಕಟೇಶ್ವರ ದೇವಸ್ಥಾನ ಆವರಣದಲ್ಲಿ ಪ್ರವಾಹವು ತನ್ನ ಆರ್ಭಟ ತೋರಿಸುತ್ತಿದೆ. ಒಟ್ಟಾರೆ ಆಂಧ್ರದ ಮಂದಿ ಈ ಮಹಾಮಳೆ ಕಂಡು ಕಂಗಾಲಾಗಿದ್ದಾರೆ.
PublicNext
19/11/2021 05:37 pm