ಹಳ್ಳದ ನೀರಿನಲ್ಲಿ ಟಾಟಾ ಏಸ್ ಕೊಚ್ಚಿಕೊಂಡು ಹೋಗಿರುವ ಘಟನೆ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಯತ್ತಿನಹಳ್ಳಿ ಗ್ರಾಮದ ಬಳಿ ನಡೆದಿದೆ.
ಚಿಕ್ಕಹರಳಹಳ್ಳಿ ಗ್ರಾಮದ ಗುಡ್ಡಪ್ಪ ಎಂಬುವರಿಗೆ ಸೇರಿದ ಟಾಟಾ ಏಸ್ ವಾಹನ ಇದಾಗಿದೆ,ಕಳೆದೆರಡು ದಿನಗಳಿಂದ ಮಳೆ ಆಗ್ತಿರೋದ್ರಿಂದ ರಭಸವಾಗಿ ಹಳ್ಳದ ನೀರು ಹರಿಯುತ್ತಲಿದ್ದು ಈ ಸಂದರ್ಭ ನಿಲ್ಲಿಸಿದ್ದ ವಾಹನ ಕೊಚ್ಚಿಕೊಂಡು ಹೋಗಿದೆ.
ವಾಹನದ ಚಾಲಕ ಕೆಳಗೆ ಇಳಿದಿದ್ದರಿಂದ ಅನಾಹುತ ತಪ್ಪಿದ್ದು,ವಾಹನದ ಮೇಲ್ಭಾಗ ಮಾತ್ರ ಕಾಣುವಂತೆ ವಾಹನ ಮುಳುಗಿದೆ. ರಾಣೆಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ ಇದಾಗಿದೆ.
PublicNext
18/11/2021 10:11 pm