ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಇಂದು ಸಂಜೆ ಧಾರಾಕಾರ ಮಳೆ ಅಗಿದೆ. ಪರಿಣಾಮ ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿದೆ.ಸತತ ಎರಡು ಗಂಟೆಗಳ ಕಾಲ ವಿವಿಧೆಡೆ ಸಂಚಾರ ದಟ್ಟಣೆ ಕೂಡಾ ಅಗಿತ್ತು.
ವಾರ್ಡ್ ನಂ. 20ರ ಹೆಬ್ಬಾಳ ವಿನೋಬಾ ಕಾಲೋನಿಯಲ್ಲಿ ತಲಾ ಒಂದೊಂದು ಮರ ಬಿದ್ದಿದೆ. ಇನ್ನೂ ಕೆ.ಅರ್ .ಪುರಂ ಭಾಗದ ಕೆಲವು ಮನೆಗೆ ನೀರು ನುಗ್ಗಿವೆ. ಶೇಷಾದ್ರಿಪುರಂ ಅಂಡರ್ ಪಾಸ್, ಶಿವಾನಂದ ಸರ್ಕಲ್, ಮೆಜೆಸ್ಟಿಕ್, ಮೈಸೂರು ರಸ್ತೆ ರಾಜರಾಜೇಶ್ವರಿ ನಗರದಲ್ಲಿ ನೀರು ನಿಂತಿತ್ತು. ಪರಿಣಾಮ ಎರಡು ತಾಸು ಟ್ರಾಫಿಕ್ ಜಾಮ್ ಉಂಟಾಗಿತ್ತು.
PublicNext
15/11/2021 10:46 pm