ಜಿಲ್ಲೆಯ ಮಲೆನಾಡು ಭಾಗದಲ್ಲಿ ವರುಣನ ಅರ್ಭಟ ಮುಂದುವರಿದಿದೆ. ಕಳಸ, ಹೊರನಾಡು, ಬಾಳೆಹೊಳೆ, ಶೃಂಗೇರಿ ಸುತ್ತಮುತ್ತ ಭಾರಿ ಮಳೆಯಾಗುತ್ತಿದೆ.
ಕಳೆದ ಒಂದು ಗಂಟೆಯಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿರುವುದರಿಂದ
ಸಂಪೂರ್ಣ ಜನಜೀವನ ಅಸ್ತವ್ಯಸ್ತವಾಗಿದೆ.
ಭಾರಿ ಮಳೆಯಿಂದ ಬಾಳೆಹೊಳೆ ಗ್ರಾಮದ ಸುತ್ತಮುತ್ತ ಜಮೀನಿಗೆ ನೀರು ನುಗ್ಗಿದೆ, ಕಾಫಿ ತೋಟಗಳಲ್ಲಿಯೂ ಭಾರಿ ನೀರಿನ ಹರಿವು ಇದೆ.ಒಟ್ಟಿನಲ್ಲಿ ಮಳೆಯ ಆರ್ಭಟಕ್ಕೆ ಮಲೆನಾಡು ಜನ ಪರಿತಪಿಸುವಂತಾಗಿದೆ.
PublicNext
14/11/2021 07:51 pm