ಮೈಸೂರು: ಜಿಲ್ಲೆಯ ಹುಣಸೂರು ತಾಲ್ಲೂಕಿನ ವಡ್ಡಂಬಾಳು ಗ್ರಾಮದ ಜನತೆಗೆ ಕಳೆದ ಹಲವಾರು ದಿನಗಳಿಂದ ಕಾಟ ಕೊಟ್ಟಿದ್ದ ಚಿರತೆ ಕೊನೆಗೂ ಬೋನಿಗೆ ಬಿದ್ದಿದೆ. ಕಳೆದ ಎರಡು ತಿಂಗಳಿನಿಂದ ನಿರಂತರವಾಗಿ ಕುರಿ ಕೋಳಿ ನಾಯಿ ಮೇಕೆ ಕೊಂದು ಹಾಕಿದ್ದ ಚಿರತೆ ಕಬ್ಬಿನ ಗದ್ದೆಯಲ್ಲಿ ಅಡಗಿ ಕುಳಿತಿರುತ್ತಿತ್ತು.
ಗ್ರಾಮದ ರೈತರಾದ ಸಿದ್ದರಾಜು ಹಾಗೂ ದೇವರಾಜುಗೆ ಸೇರಿದ ಕಬ್ಬಿನ ಗದ್ದೆ ಸಮೀಪ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಸೆರೆಗೆ ಬೋನು ಇಟ್ಟಿದ್ದರು. ಇಂದು ಬುಧವಾರ ಬೆಳಗಿನ ಜಾವ ಚಿರತೆ ಬೋನಿಗೆ ಬಿದ್ದಿದೆ. ಈ ವೇಳೆ ಚಿರತೆ ನೋಡಲು ಸ್ಥಳೀಯರು ಮುಗಿಬಿದ್ದಿದ್ದರು. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿದ್ದಾರೆ.
PublicNext
10/11/2021 12:40 pm