ಚೆನ್ನೈ: ಐದು ವರ್ಷಗಳ ನಂತರ ಭೀಕರ ಮಳೆಗೆ ಮತ್ತೊಮ್ಮೆ ತಮಿಳು ನಾಡು ಸಾಕ್ಷಿಯಾಗಿದೆ. ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಹಾಮಳೆಗೆ ಅಲ್ಲಿನ ಜನ ಜೀವನ ದುಸ್ತರವಾಗಿದೆ. ವರದಿಗಳ ಪ್ರಕಾರ ಮಹಾಮಳೆಯಿಂದ ಇದುವರೆಗೆ ನಾಲ್ವರು ಮೃತಪಟ್ಟಿದ್ದಾರೆ.
ಇನ್ನು ಹಾನಿಗೊಳಗಾದ ಪ್ರದೇಶಕ್ಕೆ ಸೋಮವಾರವೂ ಭೇಟಿ ನೀಡಿದ ಸಿಎಂ ಎಂ.ಕೆ ಸ್ಟಾಲಿನ್ ಅವರು ಸಂತ್ರಸ್ತರ ಕಷ್ಟ ಕೇಳಿದ್ದಾರೆ. ಸುಮಾರು 1400 ಜನ ಸಂತ್ರಸ್ತರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಸದ್ಯ ಇಡೀ ರಾಜ್ಯದಲ್ಲಿ ಪ್ರವಾಹದ ಭೀತಿ ಮತ್ತಷ್ಟು ಹೆಚ್ಚಾಗಿದ್ದು ಕೇಂದ್ರ ಹಾಗೂ ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಂಡಿವೆ.
PublicNext
09/11/2021 08:26 am