ವಿಜಯಪುರ: ಜಿಲ್ಲೆಯ ಕೊಲ್ಹಾರ ತಾಲೂಕಿನ ಮಲಘಾಣ, ಮಸೂತಿ ಗ್ರಾಮಗಳ ಜನರನ್ನು ಭೂಕಂಪನ ಬೆನ್ನು ಬಿಡದೆ ಕಾಡುತ್ತಿದೆ. ಈ ಗ್ರಾಮಗಳ 10 ಕೀ.ಮೀ ವ್ಯಾಪ್ತಿಯಲ್ಲಿ ಎರಡು ದಿನದಲ್ಲಿ 7 ಬಾರಿ ಜನರಿಗೆ ಕಂಪನದ ಅನುಭವವಾಗಿದೆ. ಬೆಳಗಿನ ಜಾವ 6.45, ತಡರಾತ್ರಿ 1.30 ಗಂಟೆ ಸೇರಿ 7 ಬಾರಿ ಭೂಮಿ ಕಂಪಿಸಿದೆ. ನಿನ್ನೆ ಬೆಳಗಿನ ಜಾವದಿಂದ ಮಧ್ಯಾಹ್ನದ ವರೆಗೆ 5 ಬಾರಿ ಸರಣಿ ರೂಪದಲ್ಲಿ ಭೂಮಿ ಕಂಪಿಸಿದೆ.
ಅಕ್ಟೋಬರ್ 20ರಂದು ಮಸೂತಿ-ಮಲಘಾಣ ಗ್ರಾಮಕ್ಕೆ ಹೈದ್ರಾಬಾದ್ ನ (NGRI) ರಾಷ್ಟ್ರೀಯ ಭೌಗೋಳಿಕ ಸಂಶೋಧನಾ ಸಂಸ್ಥೆಯ ಪರಿಣಿತ ಭೂವಿಜ್ಞಾನಿಗಳ ತಂಡ ಭೇಟಿ ಮಾಡಿದ್ದರು. ಪ್ರತಿ ಕಂಪನಗಳ ಮಾಹಿತಿ ಸಂಗ್ರಹಿಸಿ ಹೈದ್ರಾಬಾದ್ ಕೇಂದ್ರಕ್ಕೆ ಕಳುಹಿಸೋ ವಿಶೇಷ ಯಂತ್ರವಾದ ಸಿಸ್ಮೋಮಿಟರ್ ಅನ್ನು ಭೂಮಿಯ ಆಳದಲ್ಲಿ ನಡೆಯುವ ಬದಲಾವಣೆ, ಚಲನವಲನಗಳ ಮೇಲೆ ನಿಗಾ ಇಡಲು ಅಳವಡಿಸಲಾಗಿತ್ತು. ಒಟ್ಟಿನಲ್ಲಿ ಬಿಟ್ಟು ಬಿಡದೇ ಕಾಡುತ್ತಿರುವ ಭೂಕಂಪನಕ್ಕೆ ಜನರು ಹೈರಾಣಾಗಿದ್ದಾರೆ.
PublicNext
05/11/2021 11:19 am