ಎಚ್ಚರ ಎಚ್ಚರ ಎಚ್ಚರ.ಮತ್ತೆ ರಣಭೀಕರ ಮಳೆ ಆಗೋ ಚಾನ್ಸ್ ಇದೆ.ಹವಾಮಾನ ಇಲಾಖೆ ಈಗಲೇ ಸೂಚನೆ ನೀಡಿದೆ.ನವೆಂಬರ್-1ರಿಂದಲೇ ಕೆಲವು ರಾಜ್ಯದಲ್ಲಿ ಭೀಕರ ಮಳೆ ಆಗೋ ಸಾಧ್ಯತೆ ಇದೆ. ಇದನ್ನೆ ತಳ್ಳಿ ಹಾಕಬೇಡಿ ಅಂತಲೇ ಹವಾಮಾನ ಇಲಾಖೆ 29 ರಂದು ಇವತ್ತೆ ಎಚ್ಚರಿಕೆ ನೀಡಿದೆ.
ಬಂಗಾಳಕೊಲ್ಲಿಯಲ್ಲಿ ಮತ್ತೆ ವಾಯುಭಾರ ಕುಸಿತ ಆಗಿದೆ. ಇದರಿಂದ ಕರ್ನಾಟಕ,ಕೇರಳ,ತಮಿಳುನಾಡು,ಪುದುಚೇರಿ ಹಾಗೂ
ಆಂಧ್ರ ಪ್ರದೇಶದಲ್ಲಿ ಭಾರಿ ಮಳೆ ಸುರಿಯೋ ಸಂಭವ ಇದೆ.
ಕರ್ನಾಟಕದ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ದಿನಾಂಕ 30 ರಿಂದಲೇ ಮಳೆ ಸುರಿಯುತ್ತದೆ ಅಂತ ಹವಾಮಾನ ಇಲಾಖೆ ಟ್ವಿಟರ್ ಮೂಲಕವೇ ಎಚ್ಚರಿಸಿದೆ.
PublicNext
29/10/2021 06:34 pm