ಮೈಸೂರಿನಲ್ಲಿ ಸುರಿದ ಧಾರಾಕಾರ ಮಳೆಯ ಪರಿಣಾಮ ಚಾಮುಂಡಿ ಬೆಟ್ಟದಲ್ಲಿ ಗುಡ್ಡ ಕುಸಿತಗೊಂಡಿದೆ.
ಬೆಟ್ಟದಿಂದ ಹೋಗುವ ಮಾರ್ಗದಲ್ಲಿ ಭೂಕುಸಿತವಾಗಿದ್ದು ದಸರಾ ದೀಪಾಲಂಕಾರ "ಸುಸ್ವಾಗತ"ವಿದ್ಯುತ್ ಬೋರ್ಡ್ ಸಮೀಪದಲ್ಲಿ ಭೂ ಕುಸಿತಗೊಂಡಿದೆ.
ಪ್ರವಾಸಿಗರು ಹಾಗೂ ಭಕ್ತರು ಆ ರಸ್ತೆಯಲ್ಲಿ ಸಂಚರಿಸದಂತೆ ಪೊಲೀಸ್ ಕಮಿಷನರ್ ಡಾ.ಚಂದ್ರಗುಪ್ತ ಸೂಚನೆ ನೀಡಿದ್ದಾರೆ.ಹಾಗೂ ರಾತ್ರಿ ಸುರಿದ ಬಾರಿ ಮಳೆಯಿಂದ ನಗರದ ಹಲವು ಕಡೆಗಳಲ್ಲಿ ರಸ್ತೆಗಳೆಲ್ಲಾ ಜಾಲಾವೃತವಾಗಿದ್ದು. ಅಶೋಕ ರಸ್ತೆ, ದೊಡ್ಡ ಗಡಿಯಾರದ ವೃತ್ತದಲ್ಲಿ ಮಳೆ ನೀರಿಗೆ ದ್ವಿಚಕ್ರ ವಾಹನಗಳು ಮುಳುಗಿ ವಾಹನಗಳನ್ನು ಹೊರ ತರಲು ಸವಾರರು ಪರದಾಡುವಂತಾಗಿತ್ತು.ಒಟ್ಟಿನಲ್ಲಿ ಬಿಟ್ಟು ಬಿಡದೇ ಸುರಿದ ಮಳೆಗೆ ಮೈಸೂರು ಅಕ್ಷರಶಃ ನಲುಗಿದೆ.
PublicNext
21/10/2021 09:32 am