ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆಯಲ್ಲಿ ಮಳೆ ಹೊಡೆತಕ್ಕೆ ರೈತರು ತತ್ತರ: ಮನೆ‌ ಕುಸಿದು ವ್ಯಕ್ತಿ ಸಾವು

ದಾವಣಗೆರೆ: ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಗೆ ಮೆಕ್ಕೆಜೋಳ, ಭತ್ತ, ಅಡಿಕೆ, ಬಾಳೆ ಸೇರಿದಂತೆ‌ ಅಪಾರ ನಷ್ಟ ಸಂಭವಿಸಿದೆ. ಇನ್ನು ಮಳೆಗೆ ಮನೆ ಕುಸಿದ ಪರಿಣಾಮ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಮತ್ತೊಬ್ಬರಿಗೆ ತೀವ್ರ ಗಾಯವಾದ ಘಟನೆ ದಾವಣಗೆರೆ ತಾಲೂಕಿನ ನರಗನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮಂಜುನಾಥ (48) ಸಾವನ್ನಪ್ಪಿದ ವ್ಯಕ್ತಿ. ಗಾಯಾಳುವನ್ನು ದಾವಣಗೆರೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಮನೆ ಗೋಡೆ ಕುಸಿದ ವೇಳೆ ತೀವ್ರವಾಗಿ ಗಾಯಗೊಂಡಿದ್ದ ಮಂಜುನಾಥ ಅವರನ್ನು ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಸಾವನ್ನಪ್ಪಿದ್ದಾರೆ‌. ಮಾಯಕೊಂಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ಜಿಲ್ಲೆಯಲ್ಲಿ ಸುರಿದ ವರುಣ ಜನರ ನೆಮ್ಮದಿಗೆ ಕೊಳ್ಳಿ ಇಟ್ಟಿದ್ದಾನೆ. ಅದರಲ್ಲಿಯೂ ರೈತರ ಪಾಡಂತೂ ಹೇಳತೀರದ್ದು, ಮೆಕ್ಕೆಜೋಳ, ಭತ್ತ, ಅಡಿಕೆ, ತೆಂಗು, ಬಾಳೆ ಬೆಳೆದವರ ಗೋಳು ಹೇಳತೀರದ್ದು. ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆ ಅವಾಂತರ ಸೃಷ್ಟಿಸುವ ಜೊತೆಗೆ ಸಾವಿರಾರು ಎಕರೆ ಆಪೋಷನ ಪಡೆದಿದೆ.

Edited By : Nirmala Aralikatti
PublicNext

PublicNext

08/10/2021 03:58 pm

Cinque Terre

18.97 K

Cinque Terre

0