ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ: ಮಳೆ ಹೊಡೆತಕ್ಕೆ ನಲುಗಿದ ಬೆಣ್ಣೆನಗರಿ ಮಂದಿ.... ತೋಳಹುಣಸೆ ಸೇರಿ ಹಲವೆಡೆ ಮನೆಗಳಿಗೆ ನುಗ್ಗಿದ ನೀರು....!

ದಾವಣಗೆರೆ: ಭಾನುವಾರ ರಾತ್ರಿ ಸುರಿದ ಭಾರೀ ಮಳೆಗೆ ಬೆಣ್ಣೆನಗರಿ ತತ್ತರಿಸಿ ಹೋಗಿದೆ. ಸುಮಾರು ನಾಲ್ಕು ಗಂಟೆಗಳ ಕಾಲ ಸುರಿದ ಧಾರಾಕಾರ ಮಳೆಗೆ ಜಿಲ್ಲೆಯಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿದೆ.

ದಾವಣಗೆರೆ ನಗರದ ಅಣ್ಣಾನಗರ, ಭಾರತ್ ಕಾಲೋನಿ, ಎಸ್. ಎಂ. ಕೃಷ್ಣ ನಗರದಲ್ಲಿನ ಮನೆಯೊಳಗೆ ನೀರು ನುಗ್ಗಿದ್ದು, ಜನರು ಪರದಾಡಿದ್ರು. ಮನೆಯಲ್ಲಿ ಅಕ್ಕಿ, ಬೇಳೆ, ಕಾಳು ಸೇರಿದಂತೆ ಎಲ್ಲವೂ ನೀರಿನಿಂದ ಆವೃತವಾಗಿತ್ತು. ನೀರು ನುಗ್ಗಿದರಿಂದಾಗಿ ರಾತ್ರಿ ಮನೆಯಿಂದ ನೀರು ಹೊರಹಾಕುವಲ್ಲಿ ಸಾಕು ಸಾಕಾಗಿ ಹೋದರು.

ಧಾರಾಕಾರವಾಗಿ ಮಳೆ ಸುರಿದರೆ ಕೆಲವು ಏರಿಯಾಗಳಲ್ಲೀ ನೀರು ನುಗ್ಗುವುದು ಸಾಮಾನ್ಯವಾಗಿದೆ. ರಾಜಕಾಲುವೆ ಹಾದು ಹೋಗಿರುವ ಕಡೆಗಳಲ್ಲಿ ಈ ಸಮಸ್ಯೆ ಬರುತ್ತಲೇ ಇದೆ. ಒಳಚರಂಡಿ ವ್ಯವಸ್ಥೆ ಹದಗೆಟ್ಟಿದ್ದು, ರಾಜಕಾಲುವೆಯಲ್ಲಿ ಸರಾಗವಾಗಿ ನೀರು ಹರಿದು ಹೋಗದೇ ನಿಲ್ಲುವ ಕಾರಣದಿಂದ ಕೆಲ ಪ್ರದೇಶಗಳ ಜನರು ಮಳೆ ಬಂದರೆ ತಲೆಮೇಲೆ ಕೈಹೊತ್ತು ಕುಳಿತುಕೊಳ್ಳುವ

ದಯನೀಯ ಸ್ಥಿತಿ ಇದೆ.

ಗುಡುಗು, ಮಿಂಚು ಸಹಿತ ವರುಣನ ಆರ್ಭಟಕ್ಕೆ ಜನಜೀವನ ಅಸ್ತವ್ಯಸ್ತಗೊಂಡಿತು. ಮಳೆ ನಿಂತು ಹೋದ ಮೇಲೆ ಎಂಬಂತೆ ಮನೆಯಲ್ಲಿದ್ದ ತರಕಾರಿ, ದವಸಧಾನ್ಯಗಳು, ಅಕ್ಕಿ ಉಪಯೋಗಕ್ಕೆ ಬಾರದ ಸ್ಥಿತಿಯಲ್ಲಿದ್ದು, ಜಿಲ್ಲಾಡಳಿತ ಕೂಡಲೇ ನೆರವಿಗೆ ಧಾವಿಸಬೇಕು ಎಂದು ಒತ್ತಾಯಿಸಿದ್ದಾರೆ.

ದಾವಣಗೆರೆ ತಾಲೂಕಿನ ಮಾಯಕೊಂಡ ಕ್ಷೇತ್ರದ ಆನಗೋಡು ಹೋಬಳಿಯ ತೋಳಹುಣಸೆಯ ಹಳೇ ಊರಿನಲ್ಲಿ ಮಳೆ ಬಂದು ಎಲ್ಲಾ ಮನೆಗಳಿಗೆ ನೀರು ನುಗ್ಗಿದೆ. ಜಾನುವಾರುಗಳು ಸಂಕಷ್ಟ ಅನುಭವಿಸುವಂತಾಗಿದೆ. ಜನವಸತಿ ಪ್ರದೇಶಗಳಲ್ಲಿ ನೀರು ನುಗ್ಗಿದ ಪರಿಣಾಮ ರಾತ್ರಿಯೆಲ್ಲಾ ಜಾಗರಣೆ ಮಾಡುವಂತಾಯ್ತು. ಅಕ್ಕಿ, ರಾಗಿ, ಜೋಳ ಸೇರಿದಂತೆ ಬೆಳೆಗಳು ನೀರುಪಾಲಾಗಿವೆ.

Edited By : Manjunath H D
PublicNext

PublicNext

23/08/2021 11:18 am

Cinque Terre

72.24 K

Cinque Terre

0