ಡೆಹ್ರಾಡೂನ್ : ಪ್ರಕೃತಿ ವಿಕೋಪಕ್ಕೆ ಯಾರು ಹೊಣೆಯಲ್ಲ. ನೋಡ ನೋಡುತ್ತಿದ್ದಂತೆ ಬೃಹತ್ ಗುಡ್ಡವೊಂದು ಧರೆಗುರುಳಿದ ವಿಡಿಯೋ ಎದೆ ಝಲ್ ಎನ್ನುವಂತಿದೆ. ಈ ದೃಶ್ಯ ಕಂಡು ಬಂದದ್ದು ಕಣಿವೆ ರಾಜ್ಯ ಉತ್ತರಾಖಂಡದಲ್ಲಿ ಬೃಹತ್ ಗುಡ್ಡವೊಂದು ನೋಡನೋಡುತ್ತಿದ್ದಂತೆಯೇ ಧರೆಗುರುಳಿದ್ದು, ರಸ್ತೆಯಲ್ಲಿದ್ದ ವಾಹನ ಸವಾರರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಅಲ್ಲಲ್ಲಿ ಭೂಕುಸಿತ ಉಂಟಾಗುತ್ತಿದೆ. ಕಾಶ್ಮೀರದ ರಾಷ್ಟ್ರೀಯ ಹೆದ್ದಾರಿ 58ರಲ್ಲಿ ನಡೆದಿದ್ದು, ಬೃಹತ್ ಗುಡ್ಡದ ಭಾಗವೊಂದು ನೋಡ ನೋಡುತ್ತಿದ್ದಂತೆಯೇ ಕುಸಿದಿದೆ. ರಸ್ತೆಯಲ್ಲಿದ್ದ ನೂರಾರು ವಾಹನ ಸವಾರರು ಅಪಾಯದ ಮುನ್ಸೂಚನೆ ಅರಿತು ಸುರಕ್ಷಿತ ಸ್ಥಳದಲ್ಲಿ ನಿಂತಿದ್ದರು. ಹೀಗಾಗಿ ಯಾವುದೇ ದುರಂತ ಸಂಭವಿಸಿಲ್ಲ. ಆದರೆ ಭೂಕುಸಿತ ಪರಿಣಾಮ ರಾಷ್ಟ್ರೀಯ ಹೆದ್ದಾರಿ 58 ( ರಿಷಿಕೇಶ-ಶ್ರೀನಗರ) ಟೋಟಾ ಘಾಟಿ ರಸ್ತೆ ಬಂದ್ ಆಗಿದೆ.
PublicNext
10/08/2021 11:57 am