ರಾಯಚೂರು: ಕೃಷಿ ಜಮೀನಿನಲ್ಲಿ ದೊಡ್ಡ ಮೊಸಳೆ ಲಗ್ಗೆ ಇಟ್ಟಿದೆ. ಜಿಲ್ಲೆಯ ಲಿಂಗಸಗೂರು ಗ್ರಾಮದ ಬೊಮ್ಮನಾಳ ಗ್ರಾಮದಲ್ಲಿ ಈ ಮೊಸಳೆ ಕಾಣಿಸಿಕೊಂಡಿದೆ.
ಆಹಾರ ಅರಸಿ ಗ್ರಾಮದತ್ತ ಮೊಸಳೆ ಬಂದಿದೆ. ಗೋವಿನ ಜೋಳದ ಜಮೀನಿನಲ್ಲಿ ರಾತ್ರಿ ಕಾಣಿಸಿಕೊಂಡಿದೆ. ಮುಂಜಾವಿನಲ್ಲಿ ನೀರು ಹಾಯಿಸಲು ಹೋದ ರೈತರ ಬೃಹತ್ ಗಾತ್ರದ ಮೊಸಳೆಯನ್ನು ನೋಡಿ ಹೆದರಿದ್ದಾರೆ. ಗ್ರಾಮಸ್ಥರಿಗೆ ತಕ್ಷಣ ಈ ವಿಚಾರವನ್ನು ಹೇಳಿದ್ದಾರೆ. ಗ್ರಾಮದ ಪಕ್ಕದ ಬೋಗಾಪುರ ಕೆರೆಯಿಂದ ಆಹಾರ ಅರಸಿ ಮೊಸಳೆ ಬಂದಿರಬಹುದು ಎಂದು ಗ್ರಾಮಸ್ಥರು ಹೇಳಿದ್ದಾರೆ.
PublicNext
16/02/2021 01:30 pm