ಲಖನೌ: ಉತ್ತರಾಖಂಡದ ಚಮೋಲಿಯ ಜೋಶಿಮಠದಲ್ಲಿ ದೊಡ್ಡ ಪ್ರಮಾಣದಲ್ಲಿ ಹಿಮ ಪ್ರವಾಹ ಭಾರೀ ಅನಾಹುತ ಸೃಷ್ಠಿಸಿದೆ. ಈ ಹಿನ್ನೆಲೆಯಲ್ಲಿ ನೆರೆ ರಾಜ್ಯವಾದ ಉತ್ತರ ಪ್ರದೇಶದಲ್ಲಿ ಹೈ ಅಲರ್ಟ್ ಘೋಷಿಸಿದೆ.
ದೌಲಿ ಗಂಗಾ ನದಿಯಲ್ಲಿ ಭಾರೀ ಪ್ರವಾಹ ಉಂಟಾಗಿದ್ದರಿಂದ ನೀರಿನ ಮಟ್ಟದ ನಿರಂತರ ಮೇಲ್ವಿಚಾರಣೆ ನಡೆಸುವಂತೆ ಉತ್ತರ ಪ್ರದೇಶದ ಸರ್ಕಾರ ಗಂಗಾ ತೀರದಲ್ಲಿರುವ ಅಧಿಕಾರಿಗಳನ್ನು ಎಚ್ಚರಿಸಿದೆ.
ಹಿಮನದಿಯ ಸ್ಫೋಟವು ಅಲಕಾನಂದ ನದಿ ವ್ಯವಸ್ಥೆಯಲ್ಲಿ ಹಿಮಪಾತ ಮತ್ತು ಪ್ರವಾಹವನ್ನು ಉಂಟುಮಾಡಿತು. ಅದು ಜಲವಿದ್ಯುತ್ ಕೇಂದ್ರಗಳನ್ನು ಹೊಡೆದು ಹಾಕಿತ್ತು. ಅಲ್ಲ ಸದ್ಯ ಪ್ರವಾಹದಲ್ಲಿ 10 ಮಂದಿ ಮೃತಪಟ್ಟಿದ್ದು 125 ಮಂದಿ ನಾಪತ್ತೆಯಾಗಿದ್ದಾರೆ.
PublicNext
08/02/2021 08:28 am