ಡೆಹ್ರಾಡೂನ್: ಉತ್ತರಾಖಂಡದಲ್ಲಿ ಸಂಭವಿಸಿದ ಹಿಮಸ್ಫೋಟದಲ್ಲಿ ಸಿಲುಕಿದವರ ರಕ್ಷಣೆಗಾಗಿ ಭಾರತೀಯ ವಾಯುಸೇನೆ ರಕ್ಷಣಾ ಕಾರ್ಯಾಚರಣೆಗೆ ಹೆಲಿಕಾಪ್ಟರ್ ನಿಯೋಜನೆ ಮಾಡಲಾಗಿದ್ದು, ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಸಹಾಯವಾಣಿ ಬಿಡುಗಡೆ ಮಾಡಿದ್ದಾರೆ.
ರೆನಿ ಗ್ರಾಮದ ಸಮೀಪ ಧೌಲಿಗಂಗಾ ಹಾಗೂ ಜೋಶಿಮಠ ಪ್ರದೇಶದಲ್ಲಿ ವ್ಯಾಪಕ ಪ್ರವಾಹದ ಸ್ಥಿತಿ ಉಂಟಾಗಿದ್ದು, ಪರಿಣಾಮ 150ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ.
ರಿಷಿಕೇಶ, ಹರಿದ್ವಾರದಲ್ಲಿ ಪ್ರವಾಹದ ಭೀತಿ ಇದ್ದು, ಮುಂಜಾಗ್ರತಾ ಕ್ರಮವಾಗಿ ಉತ್ತರಾಖಂಡಕ್ಕೆ ಭಾರತೀಯ ವಾಯುಸೇನೆ ರಕ್ಷಣಾ ಕಾರ್ಯಾಚರಣೆಗಾಗಿ 2 ಎಂಐ-17 ಹೆಲಿಕಾಪ್ಟರ್, ಒಂದು ಎಎಲ್ ಎಚ್ ಧ್ರುವ್ ಚಾಪರ್ ಗಳನ್ನು ನಿಯೋಜನೆ ಮಾಡಲಾಗಿದೆ ಎಂದು ಹೇಳಲಾಗಿದೆ. ಸಹಾಯವಾಣಿ ಬಿಡುಗಡೆ ಮಾಡಿದ ಸಿಎಂ ರಾವತ್ ಇನ್ನು ಉತ್ತರಾಖಂಡ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಅವರು, ಪ್ರವಾಹ ಸಂತ್ರಸ್ಥರಿಗಾಗಿ ಸಹಾಯವಾಣಿ ಬಿಡುಗಡೆ ಮಾಡಿದ್ದು, ಯಾರೇ ಪ್ರವಾಹದಲ್ಲಿ ಸಿಲುಕಿ ಸಂಕಷ್ಟದಲ್ಲಿದ್ದರೆ ವಿಪತ್ತ ನಿರ್ವಹಣಾ ಕೇಂದ್ರದ ಸಂಖ್ಯೆ 1070 ಅಥವಾ 9557444486ಕ್ಕೆ ಕರೆ ಮಾಡಿ ಎಂದು ಹೇಳಿದ್ದಾರೆ.
ಮೂರು ಎನ್ ಡಿಆರ್ ಎಫ್ ತಂಡಗಳು ಡೆಹ್ರಾಡೂನ್ ನಿಂದ ಧಾವಿಸಿದೆ ಮತ್ತು 3 ಹೆಚ್ಚುವರಿ ತಂಡಗಳು ಐಎಎಫ್ ಚಾಪರ್ ಸಹಾಯದಿಂದ ಸಂಜೆಯ ವೇಳೆಗೆ ತಲುಪಲಿವೆ. ಎಸ್ ಡಿಆರ್ ಎಫ್ ಮತ್ತು ಎಸ್ ಡಿ ಆರ್ ಎಫ್ ತಂಡಗಳು ಸರ್ವಸನ್ನದ್ಧವಾಗಿದೆ. ಪ್ರವಾಹದಿಂದಾಗಿ ಬಿಆರ್ಒ ನಿರ್ಮಿಸುತ್ತಿರುವ ಒಂದು ಸೇತುವೆ ನಾಶವಾಗಿದೆ. ಚಮೋಲಿ, ಜೋಶಿಮಠ ಮತ್ತು ಇತರ ಕೆಳ ಹಂತದ ಪ್ರದೇಶಗಳಲ್ಲಿ ಪ್ರವಾಹ ಸಂಭವಿಸಿದೆ. ಎಂದು ಎನ್ ಡಿಆರ್ ಎಫ್ ಡಿಜಿ ಎಸ್ಎನ್ ಪ್ರಧಾನ್ ಹೇಳಿದ್ದಾರೆ.
PublicNext
07/02/2021 03:18 pm