ಸಫಾರಿ ವಾಹನವನ್ನೇ ಬೆಂಗಾಲ್ ಹುಲಿ ಹಿಂದಕ್ಕೆ ಎಳೆದ ಘಟನೆ ಬನ್ನೇರುಘಟ್ಟದ ಜೈವಿಕ ಉದ್ಯಾನವನದಲ್ಲಿ ನಡೆದಿದೆ. ಈ ಘಟನೆ ಕೆಲವು ದಿನಗಳ ಹಿಂದೆ ನಡೆದಿದ್ದು, ಇದೀಗ ವಿಡಿಯೋ ಫುಲ್ ವೈರಲ್ ಆಗಿದೆ.
ಬ್ಯಾಟರಿ ಸಮಸ್ಯೆಯಿಂದ ಟೊಯೋಟಾ ಕಾರು ಒಂದು ಕಡೆ ನಿಂತಿತ್ತು. ಈ ವೇಳೆ ಅಲ್ಲಿಗೆ ಬಂದ ವ್ಯಾಘ್ರ ವಾಹನವನ್ನು ಎಳೆದಾಡಿದ ಪರಿಣಾಮ ಟೊಯೋಟಾದಲ್ಲಿದ್ದವರು ಆತಂಕಕ್ಕೆ ಒಳಗಾಗಿದ್ದರು. ಟೊಯೋಟಾ ಹಿಂದೆ ಬರುತ್ತಿದ್ದ ವಾಹನದಲ್ಲಿದ್ದವರು ಹುಲಿ ಎಳೆದಾಡಿದ ದೃಶ್ಯವನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
PublicNext
15/01/2021 08:21 pm