ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆರಂಭದಲ್ಲಿಯೇ ಅಪಶಕುನ: ಕಂಟಕ ತರುತ್ತಾ 2021ನೇ ವರ್ಷ?

ಬೆಂಗಳೂರು: ವರ್ಷದ ಆರಂಭದಲ್ಲೇ ಅಪಶಕುನದ ಮುನ್ಸೂಚನೆ ಕೇಳಿ ಬಂದಿದೆ. ಯುದ್ಧದ ಭೀಕರತೆಯಿಂದ ಇಡೀ ಜಗತ್ತಿನಲ್ಲಿ ಅಲ್ಲೋಲ ಕಲ್ಲೋಲವಾಗಬಹುದು. ಕಳೆದ ವರ್ಷ ಕೊರೊನಾ ಮಹಾಮಾರಿ ಎಲ್ಲರ ಬದುಕನ್ನು ಹಿಂಡಿ ಹಿಪ್ಪೆ ಮಾಡಿತ್ತು. ಅದರಂತೆ ಈ ವರ್ಷವೂ ಕಂಟಕ, ಅಥವಾ ಸಾವಿನ ಮಹಾಯಜ್ಞ ಎದುರಾಗಬಹುದು ಎಂದು ಜ್ಯೋತಿಷ್ಯ ಪರಿಣತರು ಭವಿಷ್ಯ ನುಡಿದಿದ್ದಾರೆ.

ಮಕರ ಸಂಕ್ರಮಣದಂದು ಸೂರ್ಯನ ಪಥ ಬದಲಾವಣೆ ಆಗುತ್ತದೆ. ಪ್ರತಿವರ್ಷ ಸಂಕ್ರಮಣದ ದಿನ ಬೆಂಗಳೂರಿನ ಗವಿಗಂಗಾಧರೇಶ್ವರ ದೇವಸ್ಥಾನದ ಶಿವಲಿಂಗವನ್ನ ಸೂರ್ಯ ಕಿರ‌ಣಗಳು ಸ್ಪರ್ಶಿಸುತ್ತಿತ್ತು. ನಾಲ್ಕೈದು ನಿಮಿಷಗಳ ಕಾಲ ನಡೆಯುವ ಈ ವೈಶಿಷ್ಟ್ಯವನ್ನು ಸಾವಿರಾರು ಭಕ್ತರು ಕಣ್ತುಂಬಿಕೊಳ್ಳುತ್ತಿದ್ದರು. ಈ ವರ್ಷವೂ ಭಕ್ತಗಣ, ಹಾಗೂ ಅರ್ಚಕರು ದೇವಾಲಯದಲ್ಲಿ ಸೂರ್ಯರಶ್ಮಿಯನ್ನು ಎದುರು ನೋಡುತ್ತಿದ್ದರು. ಆದ್ರೆ ಈ ಬಾರಿ ಸೂರ್ಯರಶ್ಮಿ ಶಿವಲಿಂಗವನ್ನು ಸಂಧಿಸಿಲ್ಲ. ಸೂರ್ಯನಿಗೆ ಮೋಡ ಅಡ್ಡ ಬಂದ ಕಾರಣ ಕಿರಣ ಕಾಣದೇ ಸೂರ್ಯ ತನ್ನ ಪಥ ಬದಲಿಸಿದ್ದಾನೆ. ಇದು ಮತ್ತೊಂದು ಅಪಾಯದ ಮುನ್ಸೂಚನೆ ಎನ್ನಲಾಗಿದೆ‌.

Edited By : Nagaraj Tulugeri
PublicNext

PublicNext

15/01/2021 01:34 pm

Cinque Terre

68.66 K

Cinque Terre

16