ಧೋ ಎಂದು ಸುರಿಯುತ್ತಿರುವ ಮಳೆಯಿಂದಾಗಿ ಅನ್ನದಾತರ ಬಾಳು ಅತಂತ್ರವಾಗುತ್ತಿದೆ.
ಇತರ ಬೆಳೆಗಾರರು ಸೇರಿಂದತೆ ಕಾಫಿ ಬೆಳೆಗಾರರಿಗೆ ಈ ಮಳೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಕಳೆದೆರಡು ವರ್ಷಗಳಿಂದ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ, ನಂತರ ಕರೊನಾ ಲಾಕ್ ಡೌನ್ನಿಂದ ತತ್ತರಿಸಿದ್ದ ಕಾಫಿ ಬೆಳೆಗಾರರಿಗೆ ಈಗ ಅಕಾಲಿಕ ಮಳೆ ಗಾಯದ ಮೇಲೆ ಬರೆ ಎಳೆದಿದೆ.
ಕಾಫಿ ಬೆಳೆಯುವ ಪ್ರದೇಶದಲ್ಲಿ ಈ ವರ್ಷದಂತೆ ಯಾವತ್ತು ಮಳೆಯಾಗಿರಲ್ಲಿಲ್ಲ.
2021 ರ ಜನವರಿ ಸಮಯದಲ್ಲಿ ಸರಾಸರಿ ಒಂದು ಇಂಚಿನಿಂದ ಎರಡು ಇಂಚು ಮಳೆಯಾಗುತ್ತಿದ್ದರೆ, ಕೆಲವು ಕಡೆಗಳಲ್ಲಿ ಮೂರರಿಂದ ನಾಲ್ಕು ಇಂಚುಗಳಷ್ಟೂ ಮಳೆಯಾಗಿದೆ.
ಇನ್ನೂ ಎರಡು ದಿನ ಮಳೆಯಾಗುತ್ತದೆ ಎನ್ನುವ ವರದಿಯಿಂದ ಬೆಳೆಗಾರರು ದಿಗಿಲುಗೊಂಡಿದ್ದಾರೆ.
ಮಳೆಯಿಂದ ಕಾಫಿ ಒಣಗಿಸಲು ಸಾಧ್ಯವಾಗುತ್ತಿಲ್ಲ. ಅನೇ ಕಡೆ ಕೊಯ್ದಿಟ್ಟ ಕಾಫಿ ಕೊಚ್ಚಿ ಹೋಗಿದೆ.
ಗಿಡದಲ್ಲಿ ಉಳಿದಿರುವ ಕಾಫಿ ಹಣ್ಣನ್ನು ಕೊಯ್ಯಲು ಆಗುತ್ತಿಲ್ಲ. ಕಾಫಿ ಉದುರಿರುವುದರಿಂದ ಅವುಗಳನ್ನು ಹೆಕ್ಕಲು ಸಾಧ್ಯವಾಗದೇ ಕಾಫಿಯು ಗುಣಮಟ್ಟ ಕಳೆದುಕೊಳ್ಳುವ ಸಾಧ್ಯತೆ ಇದೆ.
ನಡುವೆ ಪರ್ಯಾಯ ವ್ಯವಸ್ಥೆ ಇಲ್ಲದೆ ಬೆಳೆಗಾರರು ಅತಂತ್ರ ಸ್ಥಿತಿ ಅನುಭವಿಸುತ್ತಿದ್ದಾರೆ. ಕೈಗೆ ಬಂದ ತುತ್ತು ಬಾಯಿಗಿಲ್ಲದಂತ್ತಾಗಿದೆ.
PublicNext
09/01/2021 08:30 am