ಪ್ರಕೃತಿಯ ಜೊತೆ ದಿನನಿತ್ಯದ ಬಾಂಧವ್ಯವನ್ನು ಬೆಳೆಸಿಕೊಳ್ಳಲು ಪ್ರಾಣಿ ಪಕ್ಷಿಗಳು ಸಹ ಒಂದಿಲ್ಲೊಂದು ರೀತಿಯಲ್ಲಿ ಅವಿನಾಭಾವ ಸಂಬಂಧ ಹೊಂದಿರುತ್ತವೆ.
ಎಲ್ಲರೂ ಹಾವು ಎಂದ್ರೆ ವಿಷ,ಕ್ರೂರಿ ಅಂದುಕೊಳ್ಳತ್ತಾರೆ ಆದ್ರೆ ಅದರ ರಕ್ಷಣೆಗಾಗಿ ಅದು ವಿಷ ಹೊಂದಿರುತ್ತದೆಯೇ ಹೊರತು ಅದರಲ್ಲಿಯೂ ಸಾಕಷ್ಟು ಪ್ರೀತಿಯ ಹೊನಲಿದೆ.
ಇದಕ್ಕೆ ಸಾಕ್ಷಿ ಎನ್ನುವಂತೆ ಪ್ರಕೃತಿಯ ಮಡಿಲಲ್ಲಿ ಹಾವು ಮತ್ತು ಪಕ್ಷಿವೊಂದು ಮೈಮರೆತು ಸಿಹಿ ಕಿತ್ತಾಟ ನಡೆಸಿರುವ ಈ ದೃಶ್ಯವೇ ನಿದರ್ಶನ.
ಸಾಮಾನ್ಯವಾಗಿ ಹಾವು ಬಾಯಿ ತೆರೆದರೆ ಎದುರಾಳಿಯ ಉಸಿರು ನಿಂತು ಹೋಗುತ್ತದೆ ಆದ್ರೆ ಇಲ್ಲಿ ಪಕ್ಷಿ ತನ್ನ ಕೊಕ್ಕೆಯಿಂದ ವಿಷ ಜಂತುವಿನ ಬಾಯಲ್ಲಿ ಬಾಯಿಟ್ಟು ಕುಕ್ಕುತ್ತಿದೆ.
ಈ ಪ್ರಾಣಿ ಪಕ್ಷಿಯ ಸಿಹಿ ಜಗಳ ನೋಡುಗರ ಕಣ್ಣಿಗೆ ಮುದ ನೀಡುವಂತಿದೆ.
ಪರಸ್ಪರ ಚುಂಬಿಸಿಕೊಳ್ಳುತ್ತಿವೆಯೋ, ಕಿತ್ತಾಡಿಕೊಳ್ಳುತ್ತಿವೆಯೋ ತಿಳಿಯದಂತಿದ್ದರು ಈ ಪ್ರಾಣಿ ಪಕ್ಷಿ ಜೊತೆಗಿರುವ ಆ ಗಳಿಗೆ ಮಾತ್ರ ಮನಸ್ಸಿಗೆ ಹಿತ ನೀಡುವಂತಿದೆ.
ಮನುಷ್ಯ ಬರೀ ಆಡಂಬರದ ಬದುಕನ್ನೇ ಆಶಿಸುತ್ತಾನೆ ಮುಂದಿನ ಗಳಿಗೆಯ ಚಿಂತೆಯೇ ಇಲ್ಲದೆ ಈ ಪ್ರಾಣಿ ಪಕ್ಷಿ ಇರುವ ಕ್ಷಣವನ್ನು ಆನಂದಿಸಿ ಎನ್ನುವ ಸಾರ ಸಾರುವಂತಿವೆ ಅಲ್ವೇ?
PublicNext
05/01/2021 08:48 am