ವರುಣನ ರುದ್ರನರ್ತನಕ್ಕೆ ಕೊರಟಗೆರೆ ತಾಲೂಕಿನ ವಿವಿಧ ಗ್ರಾಮಗಳ ಸಂಪರ್ಕ ಕಲ್ಪಿಸುವ ಸೇತುವೆ ಮಾಯವಾಗಿದೆ. ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಹೋಬಳಿ ವ್ಯಾಪ್ತಿಯ ಚಿಂಪುಗಾನಹಳ್ಳಿ - ಲಂಕೇನಹಳ್ಳಿ ಸಂಪರ್ಕ ಕಲ್ಪಿಸುವ ಸೇತುವೆ ಮಳೆ ನೀರಿಗೆ ಕೊಚ್ಚಿ ಹೋಗಿದೆ. ಭಾನುವಾರ ರಾತ್ರಿ ಸುರಿದ ಭಾರೀ ಮಳೆಗೆ ಮತ್ತೆ ಮಾವತ್ತೂರು ಕೆರೆಕೋಡಿ ಬಿದ್ದಿದೆ.
ಮಾವತ್ತೂರು ಕೆರೆ ಕೋಡಿ ಬಿದ್ದಿದ್ರಿಂದ ನೀರಿನ ರಭಸಕ್ಕೆ ಗರುಡಾಚಲ ನದಿಗೆ ಅಡ್ಡಲಾಗಿ ಕಟ್ಟಿರುವ ವಿವಿಧ ಸೇತುವೆಗಳು ಕೊಚ್ಚಿಹೋಗಿವೆ. ಇದ್ರಿಂದ ಹಲವು ಗ್ರಾಮಗಳ ಸಂಪರ್ಕ ಕಡಿತವಾಗಿದೆ. ಇನ್ನು ಭಾರೀ ಮಳೆಯಿಂದ, ಗರುಡಾಚಲ ನದಿ ಉಕ್ಕಿ ಹರಿಯುತ್ತಿದ್ದು, ಇದನ್ನ ವೀಕ್ಷಿಸಲು ವಿವಿಧ ಗ್ರಾಮಗಳಿಂದ ಬಂದ ಜನ ಬರ್ತಿದ್ದಾರೆ.
ರಾಘವೇಂದ್ರ ದಾಸರಳ್ಳಿ ಪಬ್ಲಿಕ್ ನೆಕ್ಸ್ಟ್,ತುಮಕೂರು
PublicNext
05/09/2022 01:06 pm