ಬೆಣ್ಣೆನಗರಿಯಲ್ಲಿ ಕಳೆದ ರಾತ್ರಿ ಸುರಿದ ಭಾರೀ ಮಳೆಯು ಅವಾಂತರ ಸೃಷ್ಟಿಸಿದ್ದು, ಹಲವೆಡೆ ಹಾನಿ ಸಂಭವಿಸಿದೆ.
ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಮೇಲೆ ಮರ ಬಿದ್ದಿದೆ. ಇದರಿಂದ ಕಾರು ಜಖಂಗೊಂಡಿದ್ದು, ದಾವಣಗೆರೆಯ ಎಸ್ ಎಸ್ ಲೇಔಟ್ ನಲ್ಲಿ ಈ ಘಟನೆ ನಡೆದಿದೆ. ಹೆಬ್ಬಾಳು ಗ್ರಾಮದಲ್ಲಿ ಭಾರೀ ಮಳೆಗೆ ಶಾಲೆ ಜಲಾವೃತಗೊಂಡಿದೆ. ರಾಷ್ಟ್ರೀಯ ಹೆದ್ದಾರಿ ಬಳಿಯಿರುವ ತಿಪ್ಪೇರುದ್ರಸ್ವಾಮಿ ಶಾಲೆ ಜಲಾವೃತಗೊಂಡಿದೆ.
ಶಾಲೆಯ ಆವರಣದೊಳಗೆ ರಸ್ತೆಯಲ್ಲಿನ ನೀರು ನುಗ್ಗಿದೆ. ಹೆದ್ದಾರಿ ಪಕ್ಕದ ಸರ್ವೀಸ್ ರಸ್ತೆಯೂ ಜಲಾವೃತಗೊಂಡಿದೆ. ದಾವಣಗೆರೆಯಲ್ಲಿ ಕಳೆದ ರಾತ್ರಿ ನಿರಂತರ 2 ಗಂಟೆಗೂ ಹೆಚ್ಚು ಹೊತ್ತು ಭಾರೀ ಮಳೆ ಆಗಿದೆ.
PublicNext
19/05/2022 11:28 am