ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ: ಹಿನ್ನೀರಿನಲ್ಲಿ ಸಿಲುಕಿದ ಶ್ವಾನ ಕಣ್ಣೀರು; ಪ್ರಾಣಾಪಾಯದಿಂದ ಪಾರು

ಜಿಲ್ಲೆಯಲ್ಲಿ ಸುರಿದ ಮಳೆಗೆ ಜನ ತತ್ತರಿಸಿ ಹೋಗಿದ್ದಾರೆ. ಜಾನುವಾರುಗಳಿಗೂ ಈ ಮಳೆ ಸಮಸ್ಯೆ ತಂದೊಡ್ಡಿದೆ. ಮೂಕ ಪ್ರಾಣಿಗಳು ನಡುಗಡ್ಡೆಯಲ್ಲಿ ಸಿಲುಕಿ ಸಂಕಷ್ಟ ಅನುಭವಿಸಿದ ಘಟನೆ ನಡೆದಿದೆ.

ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ದೇವರ ಬೆಳಕೆರೆ ಪಿಕಪ್ ಹಿನ್ನೀರಿನಲ್ಲಿ ತೋಟದ ಮನೆಗಳು ಜಲಾವೃತ್ತವಾಗಿದ್ದವು. ಈ ಸಂದರ್ಭ ಹಿನ್ನೀರಿನಲ್ಲಿ ಸಿಲುಕಿದ್ದ ನಾಯಿಯನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಅನ್ನ, ನೀರು ಇಲ್ಲದೇ ತೋಟದ ಮನೆಯಲ್ಲಿ ನಾಯಿ ಮತ್ತು ಮರಿಗಳು ಕಂಗಾಲಾಗಿದ್ದವು. ತೋಟದ ಮನೆಯಲ್ಲಿ ಮಾಲೀಕ ಇಲ್ಲದಿದ್ದ ಕಾರಣ ನಾಯಿಗಳು ಅನಾಥವಾಗಿದ್ದವು.

ನಾಯಿಯನ್ನು ತೆಪ್ಪದಲ್ಲಿ ರಕ್ಷಿಸಿ ವಡೇರಹಳ್ಳಿ ಗ್ರಾಮಕ್ಕೆ ಮೀನುಗಾರರು ಕರೆತಂದಿದ್ದಾರೆ. ಈ ಮೂಲಕ ಪ್ರವಾಹದಲ್ಲಿ ಸಿಲುಕಿದ್ದ ಶ್ವಾನ ಬದುಕಿದೆ.

Edited By :
PublicNext

PublicNext

21/05/2022 01:04 pm

Cinque Terre

100.93 K

Cinque Terre

6