ಹೊರ ಬರುತ್ತಿರುವ ನೀರಿನಿಂದ ಹೊಸ ಲೋಕವೇ ಸೃಷ್ಟಿ.. ರಭಸದ ಶಬ್ಧ ಕಿವಿಗೆ ಕೇಳಿಸುತ್ತಿದ್ದಂತೆ ರೋಮಾಂಚನ.. ಹಾಲ್ನೊರೆಯ ಸೊಬಗು ಚೆಂದವೋ ಚೆಂದ. ನೋಡಲು ಕಣ್ಣೆರಡು ಸಾಲದು. ಅಂದವೋ ಅಂದವೋ... ಚೆಂದವೋ... ಚೆಂದವೋ ಎಂಬ ಉದ್ಘಾರ.
ಇದು ದಾವಣಗೆರೆ ಸಮೀಪದ ಹರಿಹರ ತಾಲೂಕಿನ ದೇವರ ಬೆಳಕೆರೆ ಪಿಕಪ್ ಡ್ಯಾನಿಂದ ಹೊರಬರುತ್ತಿರುವ ನೀರು ಸೃಷ್ಟಿಸಿರುವ ಅದ್ಭುತ ಲೋಕ.
ದಾವಣಗೆರೆಯಿಂದ ಕೇವಲ 12 ಕಿಲೋಮೀಟರ್ ದೂರದಲ್ಲಿರುವ ದೇವರ ಬೆಳಕೆರೆ ಡ್ಯಾಂ ಒನ್ ಡೇ ಪಿಕ್ ನಿಕ್ ಗೆ ಹೇಳಿಮಾಡಿಸಿದ ತಾಣ. ಸುತ್ತಮುತ್ತಲಿನ ಗ್ರಾಮಗಳ ಜನರು, ಕಾಲೇಜು ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು, ಕುಟುಂಬ ಸಮೇತರಾಗಿ ಬಂದು ಇಲ್ಲಿನ ಸೊಬಗು ಕಂಡು ಫಿದಾ ಆಗಿದ್ದಾರೆ. ವೀಕೆಂಡ್‌ನಲ್ಲಿ ಇಲ್ಲಿಗೆ ಬರುವವರ ಸಂಖ್ಯೆ ಹೆಚ್ಚು. ಕಳೆದ 50 ವರ್ಷಗಳ ಹಿಂದೆ ಡ್ಯಾಂ ನಿರ್ಮಾಣ ಮಾಡಲಾಗಿದ್ದರೂ ಅಭಿವೃದ್ಧಿ ಆಗಿದ್ದು ಕೆಲ ವರ್ಷಗಳ ಹಿಂದೆ. ಹಾಗೇ ಯಾವುದೇ ಮೂಲಭೂತ ಸೌಲಭ್ಯ ಇರದೇ ಈ ತಾಣ ಸೊರಗಿದೆ.
PublicNext
23/08/2022 01:28 pm