ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಾವಗಡ: ಹಳ್ಳದಲ್ಲಿ ಸಿಲುಕಿಕೊಂಡ ಬಸ್: ಪ್ರಯಾಣಿಕರ ರಕ್ಷಣೆ ಮಾಡಿದ ಸ್ಥಳೀಯರು!

ಪಾವಗಡ: ತಾಲೂಕಿನ ಶ್ರೀನಿವಾಸ ಪುರ ಗ್ರಾಮದ ಕೆರೆ ತುಂಬಿ ಕೋಡಿ ಹರಿದಿದೆ.ಇದರ ಪರಿಣಾಮವಾಗಿ ಇಂದು ದೊಮ್ಮತಮೇರಿಯಲ್ಲಿ ಹಾದುಹೋಗುವಂತಹ ಹಳ್ಳದಲ್ಲಿ ಖಾಸಗಿ ಬಸ್ ಬಂದು ಸಿಲುಕಿಕೊಂಡಿದ್ದರಿಂದ ಕೆಲ ಕಾಲ ಬಿಗುವಿನ ವಾತಾವರಣ ದೊಮ್ಮತ್ಮೆರಿ ಗ್ರಾಮದಲ್ಲಿ ನಿರ್ಮಾಣವಾಗಿತ್ತು. ಬಳಿಕ ಖಾಸಗಿ ಬಸ್ ನಲ್ಲಿ ಇದ್ದಂತಹ ಪ್ರಯಾಣಿಕರನ್ನು ಸ್ಥಳೀಯರು ಹಗ್ಗದ ಮೂಲಕ ಮಾನವ ಸರಪಳಿ ನಿರ್ಮಿಸಿಕೊಂಡು ಬಸ್ಸಿನಲ್ಲಿದ್ದ ಪ್ರಯಾಣಿಕರ ರಕ್ಷಣೆಯನ್ನು ಮಾಡಿದರು.

ಬಿ.ಎಸ್.ಪಿ ಎನ್ನುವ ಖಾಸಗಿ ಬಸ್ ಹಳ್ಳದಲ್ಲಿ ಸಿಲುಕಿಕೊಂಡಿದ್ದು, ಸ್ಥಳೀಯರ ಸಮಯ ಪ್ರಜ್ಞೆಯಿಂದ ಹೆಚ್ಚಿನ ಅನಾಹುತ ವಾಗದೆ ಪ್ರಕರಣ ಸುಖಾಂತ್ಯದಲ್ಲಿ ಕೊನೆಗೊಂಡಿದೆ.

ಪ್ರಯಾಣಿಕರ ರಕ್ಷಣೆ ಮಾಡಿದ ಸ್ಥಳೀಯರಿಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.

ವರದಿ: ರಾಘವೇಂದ್ರ ದಾಸರಹಳ್ಳಿ, ಪಬ್ಲಿಕ್ ನೆಕ್ಸ್ಟ್

Edited By : Manjunath H D
PublicNext

PublicNext

03/08/2022 10:57 pm

Cinque Terre

61.51 K

Cinque Terre

0