ತಿಪಟೂರು: ತಿಪಟೂರಿನ ನಗರ ವ್ಯಾಪ್ತಿಯ ಮಾರನಗೆರೆ ಮತ್ತು ಶಾರದ ನಗರ ಬಡಾವಣೆಯಲ್ಲಿ ಚಿರತೆಗಳ ಹಾವಳಿ ಹೆಚ್ಚಾಗಿ ಕಂಡುಬರುತ್ತಿದೆ. ಜನರು ಮನೆಯಿಂದ ಹೊರಬರಲು, ಮಕ್ಕಳನ್ನು ಶಾಲಾ ಕಾಲೇಜುಗಳಿಗೆ ಕಳುಹಿಸಲು ಹೆದರುವಂತಹ ಸ್ಥಿತಿ ನಿರ್ಮಾಣವಾಗಿದೆ. ಕಳೆದ ಕೆಲವು ತಿಂಗಳುಗಳಿಂದ ಬೀಡು ಬಿಟ್ಟಿರುವ ಎರಡು ಚಿರತೆಗಳು ರಾತ್ರಿಯ ಸಮಯ ದಲ್ಲಿ ರಾಜ ರೋಷವಾಗಿ ಮನೆಯ ಅಂಗಳದಲ್ಲಿ ಬರುತ್ತಿತ್ತು ಈ ವಿಚಾರವಾಗಿ ವಿಡಿಯೋ ಮತ್ತು ಫೋಟೋಗಳನ್ನು ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.
ಚಿರತೆಗಳ ಹಾವಳಿ ಜಾಸ್ತಿಯಾಗಿದ್ದರು ಅರಣ್ಯ ಇಲಾಖೆ ಗಮನಕ್ಕೆ ತಂದರು ಪ್ರಯೋಜನವಾಗಿಲ್ಲ ಚಿರತೆ ಬೋನ್ ಇಟ್ಟು ಹೋಗಿದ್ದಾರೆ,
ವಾರ್ಡಿನ ಜನರು ಆಚೆ ಬರುವುದು ಓಡಾಡುವುದು ಕಷ್ಟವಾಗಿದೆ ಅರಣ್ಯ ಇಲಾಖೆ ಎಚ್ಚೆತ್ತು ಕೊಳ್ಳಲಿ ಸೂಕ್ತ ಕ್ರಮ ಕೈಗೊಳ್ಳಲಿ ಎಂಬುದು ಸ್ಥಳೀಯರ ಒತ್ತಾಯವಾಗಿದೆ.
ಜನರ ಮಾಹಿತಿ ಮೇರೆಗೆ ಚಿರತೆ ಬೊನ್ ಇಟ್ಟಿದ್ದೆವು ಚಿರತೆಗಳು ಬೋನಿಗೆ ಬಿದ್ದಿಲ್ಲ, ಸ್ಥಳಕ್ಕೆ ತೆರಳಿ ಪರಿಶೀಲಿಸಿ ದ್ದೇವೆ, ಬಹಿರ್ದೆಸೆಗೆ ಕುಳಿತುಕೊಂಡಾಗ ಅಥವಾ ರೈತರು ಹೊಲದಲ್ಲಿ ಬಗ್ಗಿ ಕೆಲಸ ಮಾಡುವಾಗ ದಾಳಿ ಮಾಡುತ್ತವೆ ಸಾರ್ವಜನಿಕರು ರಾತ್ರಿ ವೇಳೆ ಒಂಟಿಯಾಗಿ ಓಡಾಡುವುದನ್ನು ಸದ್ಯಕ್ಕೆ ನಿಲ್ಲಿಸಬೇಕು ಎನ್ನುವ ಸಮಾಜಾಯಿಶಿಯನ್ನು ಅರಣ್ಯ ವಲಯ ಅಧಿಕಾರಿ ಜಗದೀಶ್ ನೀಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಏನಾದರೂ ತೊಂದರೆಯಾದರೆ ಯಾರು ಹೊಣೆಗಾರರಾಗುತ್ತಾರೆ ಎಂದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿವೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ತಿಪಟೂರಿನ ಜನರು ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ವರದಿ:ರಾಘವೇಂದ್ರ ದಾಸರಹಳ್ಳಿ, ಪಬ್ಲಿಕ್ಸ್ಎಕ್ಸ್
PublicNext
27/07/2022 02:45 pm