ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ: ಕಾಡುಪ್ರಾಣಿಯ ಮೂಕವೇದನೆಗೆ ಜನರಿಂದ ಸ್ಪಂದನೆ: 50 ಅಡಿ ಆಳದ ಪಾಳು ಬಾವಿಯಿಂದ ಕಾಡುಕೋಣದ ರಕ್ಷಣೆ

ಶಿವಮೊಗ್ಗ: ಆಹಾರವನ್ನರಸಿ ಕಾಡುಕೋಣ ನಾಡಿನತ್ತ ಹೆಜ್ಜೆ ಹಾಕಿ 50 ಅಡಿ ಆಳದ ಬಾವಿಗೆ ಬಿದ್ದಿತ್ತು. ಕಾಡುಕೋಣದ ಶಬ್ಧ ಕೇಳಿ ಸ್ಥಳೀಯರು ಅರಣ್ಯ ಇಲಾಖೆ & ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ರವಾನಿಸಿದ್ರು.. ಸತತ ಮೂರು ಗಂಟೆ ಕಾರ್ಯಾಚರಣೆ ನಡೆಸಿ ಜೀವಂತವಾಗಿ ಕಾಡುಕೋಣ ರಕ್ಷಿಸುವಲ್ಲಿ ಸಾಗರದ ಕೆ.ತಿಮ್ಮಪ್ಪ ನೇತೃತ್ವದ ಅಗ್ನಿಶಾಮಕ ತಂಡ ಯಶಸ್ವಿಯಾಗಿದೆ.

ಸಾಗರ ತಾಲೂಕಿನ ಕಲ್ಮನೆ ಗ್ರಾಮ ಪಂಚಾಯ್ತಿಯ ಹಳೆ ಇಕ್ಕೇರಿ ಗ್ರಾಮದಲ್ಲಿ ಘಟನೆ ನಡೆದಿದೆ. ಗ್ರಾಮದ ಸಿದ್ದೇಶ್ವರ ದೇವಸ್ಥಾನ ಪಕ್ಕದ ನಾರಾಯಣಗೌಡರ ಜಾಗದಲ್ಲಿದ್ದ ಬಾವಿಗೆ ಕಾಡುಕೋಣ ಬಿದ್ದಿತ್ತು. ಅಗ್ನಿಶಾಮಕ ಸಿಬ್ಬಂದಿ 50 ಅಡಿ ಆಳದ ಬಾವಿಗೆ ಇಳಿದು ಹಗ್ಗದ ಸಹಾಯದಿಂದ ಕಾಡುಕೋಣವನ್ನ ರಕ್ಷಿಸಿದ್ದಾರೆ.

ಕೊಳವೆ ಬಾವಿಯಲ್ಲಿ ಆಕಸ್ಮಿಕವಾಗಿ ತೊಂದರೆಗೆ ಸಿಲುಕಿಕೊಳ್ಳುವ, ಮಕ್ಕಳನ್ನು-ಮನುಷ್ಯರನ್ನ ಕಾಪಾಡುವುದೇ ಕಷ್ಟ. ಅಂತಾದ್ರಲ್ಲಿ ಸ್ಥಳೀಯ ಗ್ರಾಮಸ್ಥರು & ಸಾಗರದ ಅಗ್ನಿಶಾಮಕ ಸಿಬ್ಬಂದಿ ಬಾವಿಲಿ ಬಿದ್ದಿದ್ದ ಕಾಡುಕೋಣನ ಜೀವಂತವಾಗಿ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿ ಎಲ್ಲರಿಗೂ ಮಾದರಿಯಾಗಿದ್ದಾರೆ..

ನ್ಯೂಸ್ ಡೆಸ್ಕ್ ಪಬ್ಲಿಕ್ ನೆಕ್ಸ್ಟ್..

Edited By :
PublicNext

PublicNext

09/07/2022 03:42 pm

Cinque Terre

88.83 K

Cinque Terre

9