ಬಾಗಲಕೋಟೆ : ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿ ತಾಲೂಕಿನ ಕುಲಹಳ್ಳಿಯಲ್ಲಿ ವಿಚಿತ್ರ ಘಟನೆವೊಂದು ನಡೆದಿದೆ.
ಮೃತ ಗಂಡ ಹಾವಿನ ರೂಪದಲ್ಲಿ ಬಂದಿದ್ದಾನೆಂದು ಅಜ್ಜಿಯೊಬ್ಬಳು ಕಳೆದ ನಾಲ್ಕು ಗಳಿಂದ ಮನೆಯಲ್ಲಿ ನಾಗರ ಹಾವಿನೊಂದಿಗೆ ಜೀವನ ನಡೆಸುತ್ತಿದ್ದಾರೆ.
ಸಾರವ್ವ ಮೌನೇಶ್ ಕಂಬಾರ ಎನ್ನುವ ಮಹಿಳೆಯೇ ಹೀಗೆ ವಿಚಿತ್ರ ನಡೆದುಕೊಂಡವರಾಗಿದ್ದಾರೆ. ನಾಲ್ಕು ದಿನಗಳ ಹಿಂದೆ ಮನೆಗೆ ನಾಗರಹಾವು ಬಂದಿದೆ.ಹಾವು ಹೊರಗೆ ಹಾಕಲು ಪ್ರಯತ್ನ ಮಾಡಿದ್ರೂ ಅದು ಹೋಗಲಿಲ್ಲವಂತೆ. ಇದರಿಂದ ಗಾಬರಿಯಾಗದ ಅಜ್ಜಿ ತನ್ನ ಪತಿಯೇ ಹಾವಿನ ರೂಪದಲ್ಲಿ ಬಂದಿರಬಹುದೆಂಬ ನಂಬಿಯಲ್ಲಿ ಅದೇ ಮನೆಯಲ್ಲಿ ವಾಸಿಸುತ್ತಿದ್ದಾರೆ.
ಇನ್ನು ಅಜ್ಜಿಯ ಪತಿ ಮೋನೇಶ್ ಎನ್ನುವರು ಹಲವು ವರ್ಷಗಳ ಹಿಂದೆ ಸಾವನ್ನಪ್ಪಿದ್ರು, ಅವರೇ ಇದೀಗ ಹಾವಿನ ರೂಪದಲ್ಲಿ ತನ್ನ ಹತ್ತಿರ ಬಂದಿದ್ದಾರೆ.
ಅದಕ್ಕೆ ಯಾರೂ ಧಕ್ಕೆ ಮಾಡಬಾರದು, ಹಾವನ್ನು ಹಿಡಿಯಬಾರದು ಎಂದು ಅಜ್ಜಿ ಸಲಹೆ ನೀಡಿದ್ದಾರೆ.
ನಾಲ್ಕು ದಿನ ಮನೆಯಲ್ಲಿ ಚಾಪೆಯ ಮೇಲೆ ಇರಿಸಿದ್ದರು.ಅಜ್ಜಿ ಮನೆಯಲ್ಲಿ ಹಾವು ಇದೆ ಎಂದು ತಿಳಿದು ಅನೇಕರು ವೀಕ್ಷಿಸಲು ಬರ್ತಿದ್ದಾರೆ.
ನಾಲ್ಕು ದಿನಗಳಿಂದ ಅಜ್ಜಿ ಮನೆಯಲ್ಲಿ ಹಾವಿಗೆ ಆಹಾರ ಇಲ್ಲದೇ ಬಳಲಿತ್ತು ಎನ್ನಲಾಗ್ತಿದೆ. ನಾಲ್ಕು ದಿನಗಳ ಬಳಿಕ ಮನೆಯಿಂದ ಹಾವು ಕಣ್ಮರೆ ಆಗಿದೆ ಎನ್ನುವ ಮಾಹಿತಿ ಇದೆ. ಆದ್ರೆ ಅಜ್ಜಿ ಮಾತ್ರ ಹಾವಿನ ರೂಪದಲ್ಲಿ ಬಂದಿದ್ದು ತನ್ನ ಗಂಡನೇ ಎಂದು ಅಚಲವಾಗಿ ನಂಬಿದ್ದಾರೆ.
PublicNext
06/06/2022 06:49 pm