ಉತ್ತರ ಬಂಗಾಳ:ರೈಲು ಬರ್ತಾನೇ ಇದೆ. ಆನೆ ಮರಿ ಹಳಿ ದಾಟಲು ನುಗ್ಗುತ್ತಲೇ ಇದೆ. ಮುಗಿತು ಬಿಡಿ. ಆನೆ ಮರಿ ಸತ್ತು ಹೋಗ್ತದೆ ಅಂದು ಕೊಂಡ್ರ ಈ ವೀಡಿಯೋ ನೋಡಿದ ಜನ. ಆದರೆ, ಮುಂದೆ ಆಗಿದ್ದೇ ಬೇರೆ. ಬನ್ನಿ, ಹೇಳ್ತಿವಿ.
ಹೌದು. ಆನೆ ಮರಿ ಹಳಿ ದಾಟಲು ಹಳಿ ಬಳಿ ಬಂದಿದೆ. ಆ ಕ್ಷಣವೇ ರೈಲು ತನ್ನ ವೇಗವನ್ನ ಕಡಿಮೆ ಮಾಡಿದೆ.ಅದರ ಪರಿಣಾಮ ಆನೆ ಬಳಿ ಬರೋ ಹೊತ್ತಿಗೆ ರೈಲು ಸ್ಟಾಪ್ ಆಗಿದೆ.
ಈ ಒಂದು ಘಟನೆ ಉತ್ತರ ಬಂಗಾಳದ ಗುಲ್ಮಾ-ಸಿವೋಕ್ ಮಧ್ಯೆ ರೈಲು ಸಂಚರಿಸುವಾಗ ನಡೆದದ್ದು,ಲೋಕೋ ಪೈಲೆಟ್‌ಗಳಾದ ಆರ್.ಆರ್.ಕುಮಾರ್ ಹಾಗೂ ಎಸ್.ಕುಂದು, ಆನೆ ಬರೋದನ್ನ ಕಂಡು ರೈಲಿ ವೇಗ ಕಡಿಮೆ ಮಾಡಿದ್ದಾರೆ. ಆನೆ ಮರಿ ಹಳಿ ದಾಟೋದನ್ನ ಮೋಬೈಲ್ ನಲ್ಲೂ ಚಿತ್ರೀಕರಿಸಿದ್ದಾರೆ.
ವಿಭಾಗೀಯ ರೈಲ್ವೆ ಮ್ಯಾನೇಜರ್ ಈ ಒಂದು ವೀಡಿಯೋವನ್ನ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ನೆಟ್ಟಿಗರು ಇದಕ್ಕೆ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದಾರೆ.
PublicNext
13/05/2022 09:49 pm