ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಶಿವಾಜಿ ಶ್ರೀಮಂತಗಡದಲ್ಲಿ ದೇವಿವಾಸ-ಹಳೆ ಕೋಟೆಯಲ್ಲಿ ಹೊಳಲಮ್ಮನ ಆರಾಧನೆ

ಗದಗ: ಶಿವಾಜಿಯ ‘ಶ್ರೀಮಂತಗಡ’ದಲ್ಲಿ ಪಬ್ಲಿಕ್ ನೆಕ್ಸ್ಟ್ -ಪುರಾತನ ಕೋಟೆ ಸಂಪೂರ್ಣ ಚಿತ್ರ. ಒಂದು ಪುರಾತನ ಕೋಟೆ. ಇಲ್ಲಿ ಎಲ್ಲವೂ ಇದೆ. ಆದರೆ ಪಳವಳಿಕೆ ರೂಪದಲ್ಲಿ ಅನ್ನೊದೇ ದುರಂತ. ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ದೇವಿಹಾಳ ಗ್ರಾಮದಲ್ಲಿದೆ ಈ ಪುರಾತನ ಕೋಟೆ.ಇದನ್ನ ಶ್ರೀಮಂತಗಡ ಅಂತಲೂ ಕರೆಯುತ್ತಾರೆ.

ಶ್ರೀಮಂತಗಡ ಇಲ್ಲಿಯ ಸುತ್ತಮುತ್ತಲಿನ ಜನಕ್ಕೆ ಹೊಳಲಮ್ಮನ ಗುಡ್ಡವೇ ಆಗಿದೆ. ಇತಿಹಾಸವನ್ನ ಕೆದಿಕಿದರೇ, ಇದು ಆನೆಗುಂದಿ ಮಹಾರಾಜರು ಆಳ್ವಿಕೆ ನಡೆಸಿದ ಕೋಟೆ ಇದಾಗಿದೆ. ಕೋಟೆ ಆವರಣದಲ್ಲಿ 17 ನೇ ಶತಮಾನದ ಹೊಳಲಮ್ಮನ ದೇವಸ್ಥಾನ ಇರೋದು ವಿಶೇಷ.

250 ಎಕರೆ ಜಾಗದಲ್ಲಿ ಕೋಟೆ ವಿಸ್ತರಿಸಿಕೊಂಡಿದೆ. 25 ಅಡಿ ಎತ್ತರ ಮತ್ತು 12 ಅಡಿ ಅಗಲದ ಕೋಟೆ ಗೋಡೆಗಳಿದ್ದವು. ಆದರೆ ಈಗ ಅವು ಅಷ್ಟು ಎತ್ತರ ಇಲ್ಲ ಬಿಡಿ. ಎಲ್ಲವೂ ಬಿದ್ದು ಹೋಗುತ್ತಿವೆ. ಹೊಳಲಮ್ಮನ ದೇವಸ್ಥಾನ ಇದೆ ಅನ್ನು ಕಾರಣಕ್ಕೆ ಅಷ್ಟೋ ಇಷ್ಟೋ ಉಳಿದು ಕೊಂಡಿದೆ.

ಆದರೆ, ಈ ಕೋಟೆಯ ವಿಹಂಗಮ ನೋಟ ನಿಜಕ್ಕೂ ಅದ್ಬುತವಾಗಿಯೇ ಇದೆ. ಪ್ರತಿ ವರ್ಷ ಇಲ್ಲಿ ಎರಡು ದಿನ ಚಾತ್ರೆ ನಡೆಯುತ್ತದೆ. ಆಗ ಇಲ್ಲಿ ಜನ ಸಾಗರವೇ ಹರಿದು ಬರುತ್ತದೆ. ಉಳಿದ ದಿನಗಳಲ್ಲಿ ಇಲ್ಲ ಜನ ಹೆಚ್ಚು ಕಾಣೋದು ಅಪರೂಪ. ಗುಡ್ಡದ ಮೇಲಿರೋ ಈ ದೇವಿ ಶಿವಾಜಿ ಮಹಾರಾಜರಿಗೆ ಖಡ್ಗ ಕೊಟ್ಟಿದ್ದಾಳೆ ಅನ್ನುವ ನಂಬಿಕೆ ಕೂಡ ಇದೆ. ಅದು ನಿಮಗೆ ಇಲ್ಲಿ ಮೂರ್ತಿರೂಪದಲ್ಲೂ ಕಾಣುತ್ತದೆ.

Edited By : Manjunath H D
PublicNext

PublicNext

29/12/2021 04:30 pm

Cinque Terre

166.14 K

Cinque Terre

6

ಸಂಬಂಧಿತ ಸುದ್ದಿ