ಮಡಿಕೇರಿ: ಪಶ್ಚಿಮ ಘಟ್ಟದ ಅರಣ್ಯ ಪ್ರದೇಶ ಹಾಗೂ ಬೆಟ್ಟದ ಸಾಲಿನ ಪ್ರಸಿದ್ಧ ಪ್ರವಾಸಿ ತಾಣ ಮಾಂದಲ್‌ಪಟ್ಟಿಯಲ್ಲಿ 12 ವರ್ಷಗಳ ಬಳಿಕ ನೀಲಕುರಿಂಜಿ ಹೂವು ಅರಳಿದ್ದು, ಬೆಟ್ಟದ ಶ್ರೇಣಿ ನೀಲಿಮಯವಾಗಿ ಕಂಗೊಳಿಸುತ್ತಿದೆ. ಸಂಘಜೀವಿಯಾಗಿ ಅರಳುವ ಹೂವು ಅಪರೂಪಕ್ಕೊಮ್ಮೆ ಅರಳಿ ಕಾಫಿ ನಾಡಿನ ಬೆಟ್ಟಗಳ ಅಂದ ಹೆಚ್ಚಿಸುತ್ತಿವೆ.
ಪ್ರವಾಸಿಗರು ಬಂದು ನೀಲಿ ಬೆಟ್ಟದ ಅಂದವನ್ನು ಸವಿದು, ಸೆಲ್ಫಿ ತೆಗೆದುಕೊಂಡು ಸಂಭ್ರಮಿಸುತ್ತಿದ್ದಾರೆ. ಹೂವು ಅರಳಿ ಒಂದು ವಾರವಾಗಿದ್ದು, ಇನ್ನೂ ಕೆಲವು ದಿನಗಳ ಸೊಬಗನ್ನು ಕಣ್ತುಂಬಿಕೊಳ್ಳಬಹುದು. ಪಶ್ಚಿಮ ಘಟ್ಟದ ಸಾಲಿನ ಕೋಟೆಬೆಟ್ಟ, ಪುಷ್ಪಗಿರಿ, ಕುಮಾರ ಪರ್ವತದಲ್ಲಿ ಹೂವುಗಳು ಅರಳುವುದುಂಟು. ಕಳೆದ ಸೆಪ್ಟೆಂಬರ್‌ನಲ್ಲಿ ಕೋಟೆಬೆಟ್ಟದಲ್ಲಿ 7 ವರ್ಷಗಳ ಬಳಿಕ ಹೂವು ಅರಳಿ ಸೌಂದರ್ಯ ಹೊರಚೆಲ್ಲಿತ್ತು.
ಪಶ್ಚಿಮಘಟ್ಟದ ಸಾಲಿನ ಕೋಟೆಬೆಟ್ಟ, ಪುಷ್ಪಗಿರಿ, ಕುಮಾರ ಪರ್ವತದಲ್ಲಿ ಹೂವುಗಳು ಅರಳುವುದುಂಟು. ಸ್ಥಳೀಯವಾಗಿ ಅವುಗಳನ್ನು ಕುರಿಂಜಿ ಹೂವುಗಳು ಎಂದು ಕರೆಯಲಾಗುತ್ತದೆ ಮತ್ತು ವೈಜ್ಞಾನಿಕವಾಗಿ ಅವುಗಳನ್ನು ಸ್ಟ್ರೋಬಿಲಾಂಥೆಸ್ ಕುಂಥಿಯಾನ ಎಂದು ಕರೆಯಲಾಗುತ್ತದೆ. ಇವು 12 ವರ್ಷಗಳಿಗೊಮ್ಮೆ ಅರಳುತ್ತವೆ.
PublicNext
19/08/2021 04:07 pm