ಯಾದಗಿರಿ ಜಿಲ್ಲೆಯ ಸುರಪುರ ನಗರದ ಕೋರ್ಟ್ ಸಮೀಪದಲ್ಲಿರುವ ತೆರೆದ ನೀರಿನ ನೆಲ ಟ್ಯಾಂಕ್ ನಲ್ಲಿ ಶ್ವಾನಯೊಂದು ಬಿದ್ದಿತ್ತು.
ವಿಷಯ ತಿಳಿದ ಅಗ್ನಿಶಾಮಕ ಸಿಬ್ಬಂದಿ ಘಟನಾ ಸ್ಥಳಕ್ಕೆ ದೌಡಾಯಿಸಿ ನೀರಿನ ಸಂಪನಲ್ಲಿ ಬಿದ್ದಿದ್ದ ಶ್ವಾನವನ್ನು ಹೊರತೆಗೆದು ಮಾನವೀಯತೆ ಮೆರೆದಿದ್ದಾರೆ.
ಅಗ್ನಿಶಾಮಕ ಠಾಣಾಧಿಕಾರಿ ಪ್ರಮೋದ್ ವಾಲಿ ಹಾಗೂ ಸಿಬ್ಬಂದಿ ಬನ್ನಪ್ಪ, ನಾಗರಾಜ್, ಅಶೋಕ್, ಶಿವಪ್ಪ, ಕೃಷ್ಣ ಸೇರಿದಂತೆ ಇತರರು ಸೇರಿಕೊಂಡು ಶ್ವಾನದ ಜೀವ ಉಳಿಸಿದ್ದಾರೆ.
ಇನ್ನು ಈ ಅಗ್ನಿಶಾಮಕ ಸಿಬ್ಬಂದಿ ಈ ಮೂಕ ಪ್ರಾಣಿಯ ಜೀವ ಕಾಪಾಡಿದ್ದಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
---
ಮೌನೇಶ ಬಿ. ಮಂಗಿಹಾಳ,
ಪಬ್ಲಿಕ್ ನೆಕ್ಸ್ಟ್ ಯಾದಗಿರಿ
PublicNext
06/08/2021 03:54 pm