ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯಾದಗಿರಿ: ಕೃಷ್ಣೆಯ ಒಡಲಲ್ಲಿ ಮೂಡಿದ ಕಾಮನಬಿಲ್ಲು..ಸೆಲ್ಫಿ ಕ್ಲಿಕ್ಕಿಸಿಕೊಂಡು ಖುಷಿಪಟ್ಟ ಜನರು.!

ವಾವ್..ಆರ್ಭಟದಿಂದ ಹರಿಯುತ್ತಿರೋ ನೀರು..ನೀರಿನ ಮೇಲೆ ಮೂಡಿರೋ ಚೆಂದದ ಕಾಮನಬಿಲ್ಲು.. ಮತ್ತೊಂದೆಡೆ ಸೇತುವೆ ಮೇಲೆ ನಿಂತು ಫೋಟೋ ಕ್ಲಿಕ್ಕಿಸಿಕೊಳ್ತಿರೋ ಪ್ರವಾಸಿಗರು. ಅಬ್ಬಬ್ಬಾ..ಈ ದೃಶ್ಯ ನೋಡಲು ಎರಡು ಕಣ್ಣು ಸಾಲದು.

ಈ ಎಲ್ಲಾ ದೃಶ್ಯ ಕಂಡು ಬಂದಿದ್ದು, ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕಿನ ನಾರಾಯಣಪುರ ಜಲಾಶಯದ ಬಳಿ. ಇಂದು ಬಸವಸಾಗರ ಜಲಾಶಯದಿಂದ 2 ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ಕೃಷ್ಣಾ ನದಿಗೆ ಹರಿಬಿಟ್ಟಿದ್ದು, ಕುಟುಂಬ ಸಮೇತ ಹಾಗೂ ಸ್ನೇಹಿತರೊಂದಿಗೆ ಜನರು ಆಗಮಿಸಿದ್ದರು.

ಜಲಾಶಯದಿಂದ ಭೋರ್ಗೆರೆಯುತ್ತಿರೋ ನೀರು ನೋಡೊದರ ಜೊತೆಗೆ ಬಣ್ಣದಿಂದ ಮೂಡಿದ ಕಾಮನಬಿಲ್ಲು ನೋಡಿ ಕ್ಯಾಮೆರಾ ಹಾಗೂ ಮೊಬೈಲ್ ನಲ್ಲಿ ಫೋಟೋ ಕ್ಲಿಕ್ಕಿಸಿಕೊಂಡ್ರು. ಅಲ್ಲದೇ ಹೊಟ್ಟೆಗೊಂದಿಷ್ಟು ಭಜಿ, ಜಿಲೇಬಿ, ಮೆಕ್ಕೆಜೋಳ ತೆನೆ ಮತ್ತು ಗೋಬಿ ಮಂಚೂರಿ ತಿಂದು ಎಂಜಾಯ್ ಮಾಡಿದರು.

-ಮೌನೇಶ ಬಿ. ಮಂಗಿಹಾಳ, ಯಾದಗಿರಿ

Edited By : Shivu K
PublicNext

PublicNext

02/08/2021 08:40 pm

Cinque Terre

100.97 K

Cinque Terre

0