ಬೀಜಿಂಗ್: ಸುಮಾರು ಮೂರು ಸಾವಿರದಿಂದ ನಾಲ್ಕೂವರೆ ಸಾವಿರ ವರ್ಷಗಳಷ್ಟು ಹಳೆಯದು ಎನ್ನಲಾಗಿ ಪ್ರಾಚೀನ ಕಲಾಕೃತಿಗಳು ಪತ್ತೆಯಾಗಿವೆ.
ನೈರುತ್ಯ ಚೀನಾದ ಸಿಚುವಾನ್ ಪ್ರಾಂತ್ಯದಲ್ಲಿ ಸುಮಾರು 13ಸಾವಿರ ಕಲಾಕೃತಿಗಳು ಪತ್ತೆಯಾಗಿವೆ. ಎಲ್ಲ ಕಲಾಕೃತಿಗಳು ಆಕರ್ಷಕವಾಗಿವೆ. ಕಂಚು, ಚಿನ್ನ ಮತ್ತು ಪಚ್ಚೆಹರಳಿನ ಕಲಾಕೃತಿಗಳು ಕೂಡ ಇದರಲ್ಲಿದ್ದು ಪುರಾತತ್ವ ಶಾಸ್ತ್ರಜ್ಞರು ಅಚ್ಚರಿಗೊಂಡಿದ್ದಾರೆ. ಇವು ಒಂದು ನಿಗೂಢ ಸಂಸ್ಥಾನಕ್ಕೆ ಸೇರಿದ ಕಲಾಕೃತಿಗಳು ಆಗಿರಬಹುದು ಎಂದು ಊಹಿಸಲಾಗಿದೆ. ವಿಗ್ರಹಗಳು ದೊರೆಗ ಸುತ್ತಲಿನ ಪ್ರದೇಶದಲ್ಲಿ ಪುರಾತತ್ವ ಶಾಸ್ತ್ರಜ್ಞರು ಸಂಶೋಧನೆ ಮುಂದುವರೆಸಿದ್ದಾರೆ.
PublicNext
15/06/2022 01:54 pm