ಚಿಕ್ಕಬಳ್ಳಾಪುರ: ನಗರದಿಂದ ದಿನಿನಿತ್ಯ ಉತ್ಪತ್ತಿಯಾಗುವ ತ್ಯಾಜ್ಯ ನೀರನ್ನು ಬಾತುಕೋಳಿ ಬಳಸಿ ಶುದ್ಧೀಕರಿಸುವ ಹೊಸ ವಿಧಾನವನ್ನು ಚಿಕ್ಕಬಳ್ಳಾಪುರ ನಗರಸಭೆ ಕಂಡುಕೊಂಡಿದೆ. ನಗರ ಸಭೆಯ ಈ ನಿರ್ಧಾರಕ್ಕೆ ಜಿಲ್ಲಾಧಿಕಾರಿ ಆರ್. ಲತಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿ 7ರ ಬದಿ ಇರುವ ನಗರಸಭೆ ತ್ಯಾಜ್ಯ ನೀರು ಸಂಸ್ಕರಣಾ ಘಟಕಕ್ಕೆ ಭೇಟಿ ನೀಡಿ ನಗರಸಭೆಯ ಹೊಸ ಈ ಪ್ರಯೋಗವನ್ನು ವೀಕ್ಷಿಸಿ ಮೆಚ್ಚುಗೆ ಸೂಚಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನೀರು ಸಂಸ್ಕರಣಾ ಘಟಕದಲ್ಲಿ ಆರು ಹೊಂಡಗಳಿವೆ. ಅವುಗಳ ಪೈಕಿ ಅಂತಿಮವಾಗಿ ನೀರು ಶುದ್ಧೀಕರಿಸುವ ಎರಡು ಹೊಂಡಗಳಲ್ಲಿ ನೂರು ಬಾತುಕೋಳಿಗಳನ್ನು ಬಿಡಲಾಗಿದೆ. ಇದೊಂದು ಪರಿಸರ ಸ್ನೇಹಿ ಪ್ರಯೋಗವಾಗಿದೆ. ತ್ಯಾಜ್ಯ ನೀರಿನ ಸಂಸ್ಕರಣೆಗೆ ಯಂತ್ರಗಳ ಬದಲು ಪಕ್ಷಿಗಳನ್ನು ಬಳಕೆ ಮಾಡಲಾಗುತ್ತಿದೆ ಎಂದು ಹೇಳಿದರು.‘ಬಾತುಕೋಳಿಗಳು ನೀರಿನಲ್ಲಿ ಚಲಿಸಬೇಕಾದರೆ ವೇಗವಾಗಿ ರೆಕ್ಕೆಗಳನ್ನು ಬಡಿಯುತ್ತವೆ. ರೆಕ್ಕೆಗಳನ್ನು ಬಡಿದಾಗ ನೀರಿನಲ್ಲಿ ಹೆಚಚ್ಆಗಿ ಆಕ್ಸಿಜನ್ ಬಿಡುಗಡೆ ಆಗುತ್ತದೆ. ಇದು ನಿಸರ್ಗ ಸಹಜ ಪ್ರಕ್ರಿಯೆ. ಇದರಿಂದ ಕೊಳಚೆ ನೀರು ಶುದ್ಧೀಕರಣವಾಗುತ್ತದೆ. ಇದು ವಿದ್ಯುತ್ ಉಳಿತಾಯ, ಪರಿಸರ ರಕ್ಷಣೆ ಆಶಯದ ಪ್ರಯೋಗವಾಗಿದೆ’ ಎಂದು ತಿಳಿಸಿದರು.
PublicNext
20/12/2020 12:26 pm